ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಉದ್ಘಾಟನಾ ಸಮಾರಂಭ
ಚಾಮರಾಜನಗರ: ಗಡಿಜಿಲ್ಲೆಯಾದ ಚಾಮರಾಜನಗರದಲ್ಲಿ ಶ್ರೀಮಂಟೇಸ್ವಾಮಿ ಪರಂಪರೆ ಹೆಚ್ಚು ಪ್ರಚಲಿತದಲ್ಲಿದೆ ಎಂದು ಕೊಳ್ಳೇಗಾಲ ತಾಲೂಕು ಕುರುಬನ ಕಟ್ಟೆ ಕ್ಷೇತ್ರ ಶ್ರೀಧರೆಗೆ ದೊಡ್ಡವರ ಸಂಸ್ಥಾನಮಠ,ಶ್ರೀಲಿಂಗಯ್ಯ ಚನ್ನಯ್ಯನವರ ಗದ್ದಿಗೆಯ ಶ್ರೀ ಬಿ. ಎಸ್. ವರುಣ್ ಲಿಂಗರಾಜೇ ಅರಸ್ ಹೇಳಿದರು.
ನಗರದ 15ನೇ ವಾರ್ಡ್ ನ ಬಾಬುಜಗಜೀವನರಾಂ ಬಡಾವಣೆಯಲ್ಲಿ ನಡೆದ ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪರಿವರ್ತನೆಯಲ್ಲಿ ಮಂಟೇಸ್ವಾಮಿಯವರ ಪಾತ್ರ ಹಿರಿಯದಾಗಿದ್ದು, ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿದ ಕೀರ್ತಿ ಮಂಟೇಸ್ವಾಮಿ ಅವರಿಗೆ ಸಲ್ಲುತ್ತದೆ ಅವರ ಪರಂಪರೆ ನೀಲಗಾರರಿಂದ ಉಳಿದಿದೆ ಎಂದರು.
ನೂತನವಾಗಿ ಉದ್ಘಾಟನೆಯಾಗಿರುವ ಶ್ರೀಮಂಟೇಸ್ವಾಮಿ ದೇವಸ್ಥಾನ ಸಮಿತಿಯು ಮಂಟೇಸ್ವಾಮಿ ಸಂಸ್ಥೆಯನ್ನು ಜೀರ್ಣೋದ್ದಾರ,ಅಭಿವೃದ್ದಿಗಾಗಿ ಮಾಡಿರುವುದು ಬಹಳ ಒಂದು ಶ್ಲಾಘನೀಯವಾದ್ದದು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಶ್ರೀಮಂಟೇಸ್ವಾಮಿಯವರು ಸಾರಿರುವ ತತ್ವಗಳು, ಸಮಾಜ ಸೇವೆಗಳನ್ನು ಸಂಘದ ಮೂಲಕ ಜನರಿಗೆ ತಲುಪುವ ಕೆಲಸ ಆಗಬೇಕು. ದೇವಸ್ಥಾನ ಅಭಿವೃದ್ದಿಯಾಗಬೇಕು. ನೀಲಗಾರರು ಸೌಕರ್ಯ ಮಾಡಿಕೊಡುವ ಕೆಲಸ ಈ ಸಂಘದಿAದ ಆಗಬೇಕು ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಒಂದು ಮಾದರಿ ಸಂಘವಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಮಾತನಾಡಿ, ಶೋ಼ಷಿತ ಸಮುದಾಯಗಳು ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಕೀರ್ತಿ ಮಂಟೇಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಚಾ.ಗು.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಬಡಾವಣೆಯ ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿಯೇ ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿಯ ಗುರಿಯಾಗಿದೆ. ಪರಂಜ್ಯೋತಿ ಮಂಟೇಲಿಂಗಯ್ಯಕಾಲಜ್ಞಾನ ಸಾರಿದ ಕಂಡಾಯದೊಡೆಯ ಶೋಪಿತ ಸಮುದಾಯಗಳ ಆರಾಧ್ಯದೈವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಹದೇವಯ್ಯ, ಶ್ರೀಮಂಟೇಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್. ನಾಗರಾಜ್, ಗೌರವ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಶಶಿಕಲಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಮೂರ್ತಿ, ಕರ್ನಾಟಕ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್, ಜಿಲ್ಲಾ ಗೌರವ ಅಧ್ಯಕ್ಷ ಹೆಚ್.ಲಿಂಗರಾಜು, ಡಾ.ಬಾಬು ಜಗಜೀವನರಾಂ ಕ್ಷೇಮಾಭಿವೃದ್ದಿ ಟ್ರಸ್ಟ್ ಗೌರವ ಅಧ್ಯಕ್ಷ ಚೆನ್ನಬಸವಯ್ಯ, ಅಧ್ಯಕ್ಷ ಶಿವಕುಮಾರ್, ಸಮಿತಿಯ ಖಜಾಂಚಿ ಎಸ್.ರಾಮಯ್ಯ, ಉಪಾಧ್ಯಕ್ಷ ಸಿದ್ದಪ್ಪಾಜಿ, ಸಂಘಟನಾ ಕಾರ್ಯದರ್ಶಿ ಲಿಂಗಣ್ಣ, ಸಹ ಕಾರ್ಯದರ್ಶಿ ಎಸ್.ರಾಜೇಶ್, ಸಂಚಾಲಕ ಚಿನ್ನಸ್ವಾಮಿ, ಸದಸ್ಯರಾದ ಎಸ್.ಜಯರಾಜ್, ಹೆಚ್.ನಾಗೇಂದ್ರ, ನಾಗಸುಂದರ್, ಎನ್.ಆನಂದ್ ಇತರರು ಹಾಜರಿದ್ದರು.