ಗ್ರಂಥಾಲಯಗಳು ಗ್ರಾಮದ ದೇಗುಲಗಳಿದ್ದಂತೆ : ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ

ಕಾಗಲವಾಡಿಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಉದ್ಗಾಟನೆ
ಚಾಮರಾಜನಗರ: ವಿದ್ಯಾರ್ಥಿಗಳು, ಯುವ ಜನಾಂಗ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಸುಸಜ್ಜಿತ ಡಿಜಿಟಲ್ ಗ್ರಂಥಾಲಯದ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಜ್ಞಾನವನ್ನು ಹೆಚ್ಚಿಸುವ ಗ್ರಂಥಾಲಯಗಳು ದೇಗುಲು ಇದ್ದಂತೆ ಎಂದು ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ತಿಳಿಸಿದರು.

ತಾಲೂಕಿನ ಕಾಗಲವಾಡಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿದ್ದ ಡಿಜಿಟಲ್ ಕೇಂದ್ರವನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಿದ ಬಳಿಕ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜ್ಞಾನದ ಮೂಲಕ ವಿಶ್ವಜ್ಞಾನಿಯಾದರು. ಜಗತ್ತಿನ ವಿಚಾರಗಳನ್ನು ತಿಳಿದುಕೊಳ್ಳಲು ಗ್ರಂಥಾಲಯಗಳು ಅತಿ ಮುಖ್ಯ. ವಿವಿಧ ನಮೂನೆಯ ಪುಸ್ತಕಗಳು, ಮಹಾಪುರುಷ ಜೀವನ ಚರಿತ್ರೆ, ಸಾಧನೆ ಮತ್ತು ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದರು.

ಕಾಗಲವಾಡಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಒಂದು ಸುಸಜ್ಜಿತ ಡಿಜಿಟಲ್ ಗ್ರಂಥಾಲಯವನ್ನು ಎಲ್ಲಾ ಸದಸ್ಯರು ಸೇರಿ ಸುಸಜ್ಜಿತ ಕಟ್ಟಡಕ್ಕ ಸ್ಥಳಾಂತರ ಮಾಡಿದ್ದೇವೆ. ಇದರ ಸೇವೆಯನ್ನು ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು, ಯುವಕ, ಯುವತಿಯರು ಹಾಗು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಸಹ ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಆಗಮಿಸಿ ಪುಸ್ತಕ ಹಾಗು ದಿನಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜ್ಯೋತಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಲಕ್ಷ್ಮಿ, ಸದಸ್ಯರಾದ ಗೀತಾ, ಮಹದೇವಸ್ವಾಮಿ, ಶಾರದಮ್ಮ, ಕೆ.ಎಸ್. ಪ್ರವೀಣ್, ಫಾಜಿಲ್ ಪಾಷಾ, ನಾರಾಯಣಸ್ವಾಮಿ,ಗಣೇಶ್, ಶಿವಮ್ಮ ಸುರೇಶ್, ಎಸ್. ಮಹದೇವಸ್ವಾಮಿ, ಬಸವರಾಜು, ಪಿಡಿಓ ಬಿ.ಎಂ. ಮಹದೇವಪ್ಪ, ಮುಖಂಡರಾದ ಮಾದಶೆಟ್ಟಿ, ಬಸವಣ್ಣನಾಯಕ, ಗ್ರಂಥಾಲಯದ ಮೇಲ್ವಿಚಾರಕು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *