ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾ.ಪಂ ವ್ಯಾಪ್ತಿಯ ಕೋಡಿಮೋಳೆ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವಂತೆ ಒತ್ತಾಯಿಸಿ ಭಗತ್ ಯುವ ಸೇನೆ ಅಧ್ಯಕ್ಷ ಕಾಂತರಾಜು ಅವರು ಚಂದಕವಾಡಿ ಗ್ರಾ.ಪಂ ಅಧ್ಯಕ್ಷ ನಟರಾಜು ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಕಾಂತರಾಜು ಅವರು ಚಂದಕವಾಡಿ ವ್ಯಾಪ್ತಿಯ ಕೋಡಿಮೋಳೆ ಗ್ರಾಮವು ದೊಡ್ಡದಾಗಿದ್ದು ಇದು ಬಿ.ಆರ್.ಹಿಲ್ಸ್ ರಸ್ತೆಯನ್ನು ಸಂಪರ್ಕಿಸುತ್ತದೆ ಈ ರಸ್ತೆಮಾರ್ಗ ಮಳೆ ಬಂದರೆ ಸರಿಯಾದ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಕಸ-ಕಡ್ಡಿಯಿಂದ ತುಂಬಿ ಅವ್ಯವಸ್ಥೆಯಿಂದ ಕೂಡಿದೆ.
ಪಕ್ಕದಲ್ಲೇ ಶಾಲೆಯಿದ್ದು ಸಾಂಕ್ರಾಮಿಕ ರೋಗದ ಭೀತಿ ಇದ್ದು,ಕೂಡಲೇ ಗ್ರಾ.ಪಂ ವತಿಯಿಂದ ಸ್ವಚ್ಛತೆ ಕೈಗೊಂಡು ಗ್ರಾಮದ ನೈರ್ಮಲ್ಯ ಕಾಪಾಡುವಂತೆ ಮನವಿ ಮಾಡಿದರು.