ಚಾಮರಾಜನಗರ: ತಾಲೂಕಿನ ಚಂದಕವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿವನಂಕಾರಪ್ಪ ಹಾಗೂ ಉಪಾಧ್ಯಕ್ಷರಾಗಿ ಸಿ. ಮಹೇಶ್ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದ ಸಂಘದ ಕಚೇರಿ ಸಭಾಂಗಣದಲ್ಲಿ ನೂತನ ಆಡಳಿತ ಮಂಡಲಿಯ ವಿಶೇಷ ಸಭೆಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷ ಆಯ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶಿವನಂಕಾರಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಸಿ. ಮಹೇಶ್ಕುಮಾರ್ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿದ್ದ ವಿ. ಹೇಮಂತಕುಮಾರ್ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಶಿವನಾಂಕಾರಪ್ಪ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಮತ್ತೊಮ್ಮೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಪ್ರಾಮಾಣಿಕವಾಗಿ ಸಂಘದ ಅಭಿವೃದ್ದಿಗೆ ದುಡಿಯುವುದಾಗಿ ತಿಳಿಸಿದರು.

ಸಭಯಲ್ಲಿ ಸಂಘದ ನೂತನ ನಿರ್ದೇಶಕರಾದ ಪ್ರದೀಪ್ಕುಮಾರ್, ಎಚ್.ಎಂ. ಬಸವಣ್ಣ, ಗೌ.ರಾಜೇಂದ್ರ, ನಾಗರಾಜು, ಮಹದೇವಸ್ವಾಮಿ, ನಾಗಣ್ಣ, ಮಹದೇವ, ಜಯಶಂಕರ, ರತ್ನಮ್ಮ, ರಾಧಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎನ್. ಸಂದೀಪ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕರಿ ಸುಂದ್ರ, ಸಿಬ್ಬಂದಿಗಳಾದ ಬಿ. ರೂಪ, ಸಿ.ಪಿ. ದಯಾನಂದ ಇತರರು ಇದ್ದರು.