ಚಾಮರಾಜನಗರ: ಚಂದ್ರಯಾನ ೩ ಯಶಸ್ವಿಯಾಗಿ ಚಂದ್ರನ ಬಳಿಗೆ ವಿಕ್ರಮಾ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳೀಸುವ ಮುಲಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿರುವ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕಾಂಗ್ರೆಸ್ ಯುವ ಮುಖಂಡ ಮಾದಾಪುರ ರವಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಎಲ್ಲಾ ವಿಜ್ಞಾನಿಗಳು ಹಾಗೂ ತಂತ್ರಜ್ಞರು, ನಿರಂತರಾಗಿ ಎರಡು ವರ್ಷಗಳು ಇದಕ್ಕಾಗಿ ದುಡಿದ ಎಲ್ಲರಿಗೂ ಸಹ ಅಭಿನಂದನಾರ್ಹರು. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ ಮಾಡಿದ ಪ್ರಥಮ ದೇಶ ನಮ್ಮದು ಎಂಬ ಹೆಗ್ಗಳಿಕೆಯಾಗಿದೆ.
ಬಾಹ್ಯಕಾಶದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಭಾರತ ಅಲ್ಲ ವಿಶ್ವವೇ ನಿಬ್ಬೇಗರಿನಿಂದ ನೋಡುವಂತೆ ಮಾಡಿದೆ. ಈ ಚಂದ್ರಯಾನದ ಯಶಸ್ವಿಯಲ್ಲಿ ಕನ್ನಡಿಗರ ಪಾಲು ಹೆಚ್ಚಿರುವುದು ಸಹ ನಮ್ಮೆಗೆಲ್ಲ ಹೆಮ್ಮೆನಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾದಾಪುರ ರವಿಕುಮಾರ್ ತಿಳಿಸಿದ್ದಾರೆ.