ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಟರು ಟಿಕೆಟ್ ನೀಡಿದರೆ ಖಂಡಿತ ಈ ಕ್ಷೇತ್ರದಿಂದ ಮತ್ತೇ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದು ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಆರ್. ರಾಜು ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದ ಪ್ರವಾಸ ಮಾಡಿದ್ದೆ, ಮತದಾರರು ಹಾಗೂ ಬಿಜೆಪಿ ಹಿರಿಯ ಮುಖಂಡರು ವರಿಷ್ಠರು ಟಿಕೆಟ್ ನೀಡಲು ಉತ್ಸಾಹ ಹೊಂದಿದ್ದರು. ಹಿರಿಯರಾದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಅಂತಿಮವಾಗಿ ಟಿಕೆಟ್ ಘೋಷಣೆಯಾದ ಬಳಿಕ ನಾನು ಸೇರಿದಂತೆ ಎಲ್ಲ ಮುಖಂಡರು ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡಿದೆವು. 2024 ರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಎಂದು ಸ್ವತಃ ವಿ. ಶ್ರೀನಿವಾಸಪ್ರಸಾದ್ ಅವರೇ ನಿವೃತ್ತಿ ಘೋಷಣೆ ಮಾಡಿದ್ದಾರೆ, ಹೀಗಾಗಿ ಈ ಬಾರಿ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದÀರು.
ಈಗಾಗಲೇ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಬಿಜೆಪಿ ಪ್ರಮುಖ ಮುಖಂಡರು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ವಿವಿಧ ಸಮುದಾಯಗಳ ಮಠಾಧಿಪತಿಗಳು, ಧರ್ಮ ಗುರುಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದಿದ್ದು, ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಟರಲ್ಲಿಯು ಮನವಿ ಮಾಡಿದ್ದೇನೆ. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಕ್ಷೇತ್ರ ಪ್ರವಾಸದಲ್ಲಿದ್ದು, ಜನರ ಮನಸ್ಸಿನಲ್ಲಿಯು ಸಹ ರಾಜು ಅವರಂಥ ಅನುಭವಿಗಳು ಹಾಗೂ ವಿಚಾರವಂತರು ಲೋಕಸಭೆಗೆ ಆಯ್ಕೆಯಾದರೆ ಇನ್ನು ಹೆಚ್ಚಿನ ಸೇವೆ ಮತ್ತು ಗೌರವ ಬರುತ್ತದೆ, ಕ್ಷೇತ್ರದ ಅಭಿವೃದ್ದಿಯು ಸಹ ಅಗುತ್ತದೆ ಎಂಬ ವಿಶ್ವಾಸದ ಮಾತುಗಳಾಡುತ್ತಿದ್ದಾರೆ ಎಂದು ರಾಜು ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಎಚ್.ಡಿ. ಕೋಟೆಯಲ್ಲಿ ಕೃಷಿಕನಾಗಿದ್ದೇನೆ. ನಿವೃತ್ತಿಯ ಬಳಿಕ ಎಚ್.ಡಿ.ಕೋಟೆಯ ಜಮೀನಿನ ಮನೆಯಲ್ಲಿ ವಾಸ್ತವ್ಯ ಹೂಡಿ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದೇವೆ. ನನ್ನ 35 ವರ್ಷಗಳ ಸೇವೆ ಪೈಕಿ 16 ವರ್ಷಗಳ ಕಾಲ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೇ ಪ್ರಮುಖವಾದ ನಿರ್ಧಾರಗಳನ್ನು ಮಾಡಿ, ಅರಣ್ಯ ಸಂಪತ್ತು, ಹೆಚ್ಚಳ, ಕಳ್ಳಬೇಟೆ ತಡೆ ಹಾಗೂ ಹುಲಿ ಯೋಜನೆ ಜಾರಿಗೆ ಪ್ರಮುಖ ಕಾರಣಕರ್ತನಾಗಿದ್ದೇವೆ. ಅಂದು ನಾನು ಮಾಡಿದ ಹುಲಿ ಗಣತಿ ಪರಿಣಾಮ 29 ಹುಲಿಗಳು ಪತ್ತೆಯಾಗಿದ್ದವು. ಈಗ ಅದರ ಪ್ರಮಾಣ ಆಂದಾಜು 190 ಹುಲಿಗಳು ಇವೆ. ಇದು ಸಹ ನನ್ನ ಕೊಡುಗೆಯಾಗಿದೆ ಎಂದರು.
ಕಾಡುಗಳ್ಳ ವೀರಪ್ಪನ್ ಮರಣದ ನಂತರ 2004ರಲ್ಲಿ ಡಿಎಫ್ಓ ಆಗಿ ವರ್ಗಾವಣೆಯಾಗಿ ಬಂತ ನಂತರ ಕಳ್ಳಬೇಟೆ ತಡೆದು ಅರಣ್ಯ ಹಾಗೂ ವನ್ಯ ಜೀವಿಗಳ ರಕ್ಷಣೆಗೆ ಒತ್ತು ಕಾಡಂಚಿನ ಗ್ರಾಮಗಳ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಿಸುವ ಮೂಲಕ ವನ್ಯಪ್ರಾಣಿಗಳ ರಕ್ಷಣೆ ಮತ್ತು ಜಾನುವಾರುಗಳಿಗೂ ವಿವಿಧ ರೋಗಗಳು ಹಾಗೂ ವೈರಸ್ ಹರಡದಂತೆ ಮುನ್ನಚ್ಚರಿಕೆ ವಹಿಸಿದ್ದೇ. ಅಲ್ಲದೇ, ಕೇರಳ ಮಾರ್ಗದ ಸುಲ್ತಾನ್ ಬೇತ್ತರಿ, ಮತ್ತು ಕೇರಳ ದಿಂದ ಬೆಂಗಳೂರು ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿ ಪರಿಣಾಮ ಬಹಳಷ್ಟು ಅಕ್ರಮಗಳು ಸ್ಥಗಿತಗೊಂಡಿದ್ದವು. ರಾತ್ರಿವೇಳೆ ವನ್ಯ ಪ್ರಾಣಿಗಳು ಸಹ ಸಂಚರಿಸಲು ಅನುಕೂಲವಾಯಿತ್ತು. ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ, ರಾಜ್ಯ ಹಾಗೂ ಕೇಂದ್ರದ ಸರ್ಕಾರದ ಮೂಲಕ ಒತ್ತಡ ತಂದು ಕಾಯ್ದೆ ಜಾರಿಯಾದ ಪರಿಣಾಮ ಕಳೆದ 15 ವರ್ಷಗಳಿಂದ ನಿರಂತರವಾಗಿ ರಾತ್ರಿ ಸಂಚಾರ ಬಂದ್ ಆಗಿದೆ. ಸುಪ್ರೀಂಕೋರ್ಟ್ಗೆ ಹೋದರು ಸಹ ತೆರವು ಮಾಡಲು ಸಾಧ್ಯವಾಗಿಲ್ಲ. ಇವೆಲ್ಲರು ಸಹ ನಾನು ಮಾಡಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗಿದೆ. ಆದೇ ರೀತಿ ಜನ ಸೇವೆ ಮತ್ತು ಸಮಾಜ ಸೇವೆ ಮಾಡಬೇಕೆಂಬ ಆಕಾಂಕ್ಷೆ ಹೊಂದಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶವನ್ನುಟ್ಟುಕೊಂಡು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ನಾಯಕ, ಮಾಜಿ ಸದಸ್ಯ ಬಸವರಾಜು, ಮುಖಂಡರಾದ ವಿ. ಶ್ರೀನಿವಾಸಪ್ರಸಾದ್, ಮಾಲಂಗಿ ಮೂರ್ತಿ, ತೊರವಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಇದ್ದರು.