ಚಾಮರಾಜನಗರದ 13 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಸುತ್ತೂರು ಶ್ರೀಗಳು, ಸಚಿವರಾದ ಶೋಭಾ ಕರಂದ್ಲಾಜೆ, ಕೆ. ವೆಂಕಟೇಶ್ ಅಭಿನಂದನೆ
ಚಾಮರಾಜನಗರ: ಮಂಗಳೂರಿನಲ್ಲಿ ಇತ್ತಿಚೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಾಮರಾಜನಗರ ಜಿಲ್ಲೆಯ ಕ್ರೀಡಾಪಟುಗಳು ಭಾಗಹಿಸಿ, 13 ಮಂದಿ ಚಿನ್ನ ಹಾಗು ಬೆಳ್ಳಿ ಪದಕವನ್ನು ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂತರರಾಷ್ಟ್ರೀಯ ಕ್ರೀಡಾಪಟು ದಿ. ಲೋಕನಾಥ್ ಬೋಳಾರ್ ಅವರ ಸ್ಮರಣಾರ್ಥ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಟ್‍ಪುಟ್ ವಿಭಾಗದಲ್ಲಿ ಜಿಲ್ಲೆಯ ಇಬ್ಬರು ಕ್ರೀಡಾಪಟುಗಳಾದ ಅರ್ಜುನ್ ಎ. ಹಾಗೂ ಸೈಯದಾ ಇನಮ್ ಮಾರೈಜಿಯಾ ಅವರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಗಳಿಸಿದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ನಿನ್ನೆ ನಡೆದ ಶ್ರೀರಾಜೇಂದ್ರಶ್ರಿಗಳ 108ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸÀಲು ಆಗಮಿಸಿದ್ದ ಗಣ್ಯರು ಶಾಲು ಹೊದಿಸಿ ಯುವ ಕ್ರಿಡಾಪಟುಗಳಿಗೆ ಶುಭ ಕೋರಿದರು.

ಚಾ.ನಗರಕ್ಕೆ ಆಗಮಿಸಿದ್ದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ಇಬ್ಬರು ಕ್ರೀಡಾಪಟುಗಳನ್ನು ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಶಾಸಕರಾದ ಎ.ಆರ್.ಕೃಷ್ಣಮುರ್ತಿ, ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ ಪ್ರಸಾದ್, ಜಿಲ್ಲಾ ಅಥ್ಲೇಟಿಕ್ ಅಧ್ಯಕ್ಷ ಎಲ್. ಸುರೇಶ್, ಕಾರ್ಯದರ್ಶಿ ಮಹೇಶ್, ತರಬೇತುದಾರ ಶಿವು ಮೊದಲಾದವರು ಇದ್ದರು.

Leave a Reply

Your email address will not be published. Required fields are marked *