ಜಿಲ್ಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಕೊರತೆ ಇಲ್ಲ : ಮಹೇಶ್‌ ಕುದರ್‌

  • ಕಮರ್ಷಿಯಲ್ ಸಿಲಿಂಡರ್ ವಿತರಣೆಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿದ್ದು, ಒಂದು ವಾರದೊಳಗೆ ಸರಿ ಆಗುತ್ತದೆ

ಚಾಮರಾಜನಗರ: ಜಿಲ್ಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ ವಿತರಣೆಯಲ್ಲಿ ಯಾವುದೇ ಕೊರತೆ ಇಲ್ಲ. ಆಗಾಗಿ ಗ್ರಾಹಕರು ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಗರದ ಮಹೇಶ್ ಗ್ಯಾಸ್ ಏಜೆಸ್ಸಿ ಮಾಲೀಕ ಮಹೇಶ್‌ಕುದರ್ ಹೇಳಿದರು.
   ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ಯಾಸ್ ಸಿಲಿಂಡರ್ ಪೊರೈಕೆಯಲ್ಲಿ ಯಾವುದೇ ತರದ ಆಡಚಣೆ, ವಿಳಂಬ ಆಗುತ್ತಿಲ್ಲ.  ಯುದ್ಧದಿಂದ ಮೊದಲ ಎರಡು ದಿನ ಗೊಂದಲ ಶುರುವಾಯಿತು. ಅನಿಲ ಕಂಪನಿಗಳಿಂದ ಸಿಲಿಂಡರ್ ಪೊರೈಕೆ ಕಡಿಮೆ ಆಗಬಹುದು ಎಂಬ ತಪ್ಪು ಮಾಹಿತಿ ಗ್ರಾಹಕರಲ್ ಬರಲು ಶುರುವಾಯಿತು. ಗ್ರಾಹಕರು ಹೆಚ್ಚಿನ ಬುಕ್ಕಿಂಗ್ ಶುರು ಮಾಡಿದರು. ಇದಕ್ಕಿಂತ ಮೊದಲು ಸಿಲಿಂಡರ್ ಬುಕ್ಕಿಂಗ್ 10 ದಿನಗಳ ಕಾಲಾವಕಾಶ ಇತ್ತು. ಈಗ ಅದನ್ನು 25 ದಿನಗಳಿಗೆ ವಿಸ್ತರಿಲಾಗಿದೆ. ನಗರದಲ್ಲಿ ಒಂದು ಸಿಲಿಂಡ‌ರ್ ಹೊಂದಿದ್ದರೆ 25 ದಿನ. 2 ಸಿಲಿಂಡ‌ರ್ ಹೊಂದಿದ್ದರೆ 40 ಗ್ರಾಮಾಂತರ ಪ್ರದೇಶಗಳಿಗೆ 45 ದಿನ ಬುಕ್ಕಿಂಗ್‌ಗೆ ಕಾಲಾವಕಾಶ ನಿಗದಿ ಮಾಡಲಾಗಿದೆ. ಒಂದು, ಎರಡು ಸಿಲಿಂಡ‌ರ್ ಇಟ್ಟುಕೊಂಡಿರುವವರಿಗೆ ಸ್ವಲ್ಪ ವಿಳಂಬ ಆಗುತ್ತಿದೆ ಎಂದರು.
ಸ್ವಲ್ಪಮಟ್ಟಿಗೆ ಕಮರ್ಷಿಯಲ್ ಸಿಲಿಂಡರ್ ವಿಳಂಬ ಆಗುತಿದೆ. ಏಕೆಂದರೆ ಹೊರದೇಶದಲ್ಲಿ ಸಿಲಿಂಡ‌ರ್ ಬರುತ್ತಿದೆ. ಅದು ವಿಳಂಬವಾದರೆ ಗೃಹ ಬಳಕೆದಾರರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಕಮರ್ಷಿಯಲ್‌ಗೆ ಕೊಡುವುದನ್ನು. ಸ್ವಲ್ಪಮಟ್ಟಿಗೆ ನಿಲ್ಲಿಸಲಾಗಿದೆ. ಮತ್ತೆ ಎರಡು ದಿನಗಳಿಂದ ಶುರು ಮಾಡಲಾಗಿದೆ. ಯಾವುದೇ ರೀತಿ ತೊಂದರೆಗಳಿರುವುದಿಲ್ಲ. ಜಿಲ್ಲೆಯಲ್ಲಿ 23 ಗ್ಯಾಸ್‌ ಸಿಲಿಂಡ‌ರ್ ವಿತರಕರು ಇದ್ದೇವೆ. 3.32.433 ಲಕ್ಷ ಗ್ರಾಹಕರು ಇದ್ದು ಎಲ್ಲರಿಗೂ ಬುಕ್ಕಿಂಗ್ ಆಗುತ್ತಿದ್ದು ಯಾವುದೇ ತರದ ತೊಂದರೆ ಇಲ್ಲ. ಬುಕ್ಕಿಂಗ್ ಹೆಚ್ಚು ಆಗಿರುವುದರಿಂದ ವಿಳಂಬ ಆಗುತ್ತಿದೆ. ಎಲ್ಲರಿಗೂ ಸಿಲಿಂಡರ್ ವಿತರಣೆಯಾಗುತ್ತಿದೆ. ಗ್ರಾಹಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
  ಪತ್ರಿಕಾಗೋಷ್ಠಿಯಲ್ಲಿ  ಯಳಂದೂರು ಗೋಪಾಲ್ ಗ್ಯಾಸ್ ಏಜೆಸ್ಸಿ ಮಾಲೀಕ ನಿರಂಜನಸ್ವಾಮಿ, ಜ್ವಾಲೇಶ್ವರೆ ಇಂಡೇನ್ ಏಜೆನ್ಸಿ ಮಾಲೀಕ ಶಮಿತ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *