ಮೈಸೂರು,ಅ.14.(ಕರ್ನಾಟಕ ವಾರ್ತೆ):- ದಸರಾ ಮಹೋತ್ಸವ 2023 ರ ಉದ್ಘಾಟನೆಯನ್ನು ನಾದಬ್ರಹ್ಮ ಡಾ.ಹಂಸಲೇಖ ಅವರು ಚಾಮುಂಡಿ ದೇವಿಯ ಅಗ್ರ ಪೂಜೆಯೊಂದಿಗೆ ದಿನಾಂಕ 15-10-2023 ರಂದು ಬೆಳಿಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ ದಲ್ಲಿ ನೆರವೇರಿಸಲಿದ್ದಾರೆ ಹಾಗೂ ಮೈಸೂರು ದಸರಾ ಮಹೋತ್ಸವ 2023ರ ದಿನಾಂಕ:24-10-2023 ರಂದು ಮಂಗಳವಾರ ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಗಳು ಫೇಸ್‌ಬುಕ್ ಯೂಟ್ಯೂಬ್ ನತ್ತು ವೆಬ್‌ಸೈಟ್ ನಲ್ಲಿ ದಿನಾಂಕ: 15-10-2023 ರಿಂದ 24-10-2023 ರವರಗೆ ನೇರ ಪ್ರವಾಸವಾಗಲಿದೆ.
Facebook Link.- https://facebook.mysoredasara.gov.in
YouTube Link- https://youtube.mysoredasara.gov.inWebsite Link- https://mysoredasara.gov.in/
ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.