ದೊಡ್ಡಮೋಳೆ ಗ್ರಾ,ಪಂ ಕಾಂಗ್ರೆಸ್ ತೆಕ್ಕೆಗೆ, ಒಂದು ಮತಗಳ ಅಂತರದಿ0ದ ಗೆಲುವು

ಚಾಮರಾಜನಗರ ಆ.೧ ತಾಲೂಕಿನ ದೊಡ್ಡಮೊಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ತನ್ನದಾಗಿಸಿಕೊಂಡಿದ್ದು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ನಿರ್ಮಲ ಹಾಗೂ ಉಪಾಧ್ಯಕ್ಷರಾಗಿ ಮಹದೇವಶೆಟ್ಟಿ ಆಯ್ಕೆಯಾದರು.

ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲ ಹಾಗೂ ಮೀನಾಕ್ಷಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಶೆಟ್ಟಿ ಹಾಗೂ ಗಾಯತ್ರಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ನಿರ್ಮಲ ಅವರಿಗೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಮಹದೇವಶೆಟ್ಟಿ ಅವರಿಗೂ ತಲಾ ೮ ಮತಗಳು ಲಭಿಸಿ ಒಂದು ಮತಗಳ ಅಂತರದಿAದ ಜಯಗಳಿಸಿದರು. ಮೀನಾಕ್ಷಿ ಹಾಗೂ ಗಾಯತ್ರಿ ಅವರಿಗೆ ೭ ಮತಗಳು ದೊರೆತು ಪರಾಭವಗೊಂಡರು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಲೀಲಾವತಿ ಘೋಷಿಸಿದರು.

ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ವಿಜಯೋತ್ಸವ; ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಣೆ ಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಶಾಸಕ ಪುಟ್ಟರಂಗಶೆಟ್ಟರಿಗೆ ಜಯಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ನಿರ್ಮಲ ಅವರು ತಮ್ಮನ್ನು ಬೆಂಬಲಿಸಿ ಮತ ನೀಡಿದ ಸದಸ್ಯರಿಗೆ ಅಭಿನಂಧಿಸುವುದಾಗಿ ತಿಳಿಸಿದ ಅವರು ದೊಡ್ಡ ಮನೆ ಕುಟುಂಬಕ್ಕೆ ಪಂಚಾಯ್ತಿ ಅಧಿಕಾರ ನೀಡಲಾಗಿದ್ದು, ಗ್ರಾಮ ಪಂಚಾಯ್ತಿಯ ಸಮಗ್ರ ಅಭಿವೃದ್ದಿಗೆ ಎಲ್ಲರ ಸಹಕಾರ ಪಡೆದು ಶ್ರಮಿಸಲಾಗುವುದು, ಕುಡಿಯುವ ನೀರು, ರಸ್ತೆ, ಚರಂಡಿ, ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರು ದೊರೆಸ್ವಾಮಿ, ಸದಸ್ಯರಾದ ಮಂಜುನಾಥ, ಶಾಂತರಾಜು, ಡಿ.ಎನ್. ಲೋಕೇಶ್, ಮೇಘ ವೆಂಕಟರಾಮು, ವನಜಾಕ್ಷಿ, ಕಾಂಗ್ರೆಸ್ ಮುಖಂಡರಾದ ವೆಂಕಟರಾಮು, ನಾಗೇಶ್, ನಿರ್ಮಲ ರಂಗನಾಥ್, ಶ್ರೀನಿವಾಸ್, ಮಹೇಶ್, ಮಲ್ಲಣ್ಣ, ಕುಮಾರ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *