ನಗರಸಭಾ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ

ಚಾಮರಾಜನಗರ: ನಗರಸಭಾ ಕಚೇರಿಯಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ನಗರಸಭಾ ಸದಸ್ಯರು ಹಾಗೂ ಪೌರಾಯುಕ್ತ ರಾಮದಾಸ್ ಅವರು ಪುಷ್ಪಾರ್ಚನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಆಯುಕ್ತ ರಾಮದಾಸ್ ಅವರು, ವಿಶ್ವಕ್ಕೆ ರಾಮಾಯಣದಂತಹ ಸಾರ್ವಕಾಲಿಕ ಮೌಲ್ಯವನ್ನೊಳಗೊಂಡ ಮಹಾನ್ ಗ್ರಂಥವನ್ನು ಬರೆದ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರಾಗಿದ್ದು ಅವರ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮಲೆಲ್ಲರ ಪುಣ್ಯವಾದ ಕೆಲಸವಾಗಿದೆ, ವಾಲ್ಮೀಕಿ ರಾಮಾಯಣವೆಂದೇ ಪುರಾಣದಿಂದಲೂ ಪ್ರಸಿದ್ದವಾಗಿರುವ ಈ ಗ್ರಂಥವನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಆದರ್ಶಗಳನ್ನು ಪಾಲಿಸಿದ್ದೇ ಆದರೆ ಅದಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ನಗರಸಭಾ ಸದಸ್ಯ ಮಹೇಶ್ ಮಾತನಾಡಿ, ರಾಮಾಯಣದಲ್ಲಿ ಶ್ರೀರಾಮನ ಆದರ್ಶ ಗುಣಗಳು, ಸೀತೆಯ ಗುಣಗಳು ಸಮಾಜಕ್ಕೆ ಮಾದರಿಯಾಗಿದ್ದು, ವಾಲ್ಮೀಕಿ ರಾಮಾಯಣದ ಪ್ರತಿಯೊಂದು ಭಾಗದಲ್ಲೂ ಉತ್ತಮ ಮೌಲ್ಯಗಳನ್ನು ಒಳಗೊಂಡಿದೆ. ಭಾರತದ ಮಹಾನ್ ಆದರ್ಶ ಕಾವ್ಯಗಳಲ್ಲಿ ರಾಮಾಯಣ, ಮಹಾಭಾರತ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಚಿನ್ನಮ್ಮ, ಗಾಯಿತ್ರಿ, ಅಭ್ರಾರ್, ಕಲೀಮ್, ಬಸವಣ್ಣ, ಶಿವರಾಜು, ಮಹೇಶ್, ನಗರಸಭಾ ಎಇಇ ನಟರಾಜು,À ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ, ಆರೋಗ್ಯ ನಿರೀಕ್ಷಕ ಮಂಜು, ಸೇರಿದಂತೆ ನಗರಸಭಾ ನೌಕರರು ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *