ನಾಡು-ನುಡಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶಾ.ಮುರಳಿ

ಚಾಮರಾಜನಗರ: ನಾಡು-ನುಡಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಹೇಳಿದರು.

ನಗರದ 15ನೇ ವಾರ್ಡ್ ಬಾಬುಜಗಜೀವನರಾಂ ಬಡಾವಣೆಯಲ್ಲಿ ಕುವೆಂಪು ಕನ್ನಡಕಲಾ ರಕ್ಷಣಾ ವೇದಿಕೆ ವತಿಯಿಂದ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸುವರ್ಣ ಕರ್ನಾಟಕ ಮಹೋತ್ಸವ ಸಂಭ್ರಮ ಒಂದು ಕಡೆ ಖುಷಿ ಕೊಟ್ಟರೆ ಮತ್ತೊಂದು ಕಡೆ ಕಾವೇರಿ ನೀರು ನಿರ್ವಹಣಾ ಮಂಡಳಿ, ಸರ್ಕಾರಗಳು ಕಾವೇರಿ ನೀರು ವಿಚಾರದಲ್ಲಿ ರಾಜ್ಯ ತುಂಬಾ ಅನ್ಯಾಯ ಮಾಡುತ್ತಿರುವುದು ರಾಜ್ಯ, ಕೇಂದ್ರ ಸರ್ಕಾರದ ನಿರ್ಲಕ್ಷತೆಯಿಂದ ರಾಜ್ಯದಲ್ಲಿ ಕುಡಿಯುವ ನೀರಿಗೂ ತಂಭಾ ಕಷ್ಟವಾಗುತ್ತದೆ. ಆಗಾಗಿ ಕಾವೇರಿ ಹೋರಾಟಕ್ಕೆ ಸರ್ವರೂ ಬೆಂಬಲ ಕೊಡಬೇಕು ಎಂದರು.

ಇದೇ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ೨ ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ವೇದಿಕೆ ಅಧ್ಯಕ್ಷ ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ : ಕನ್ನಡ ಚಳವಳಿಗಾರರಾದ ಶಾ.ಮುರಳಿ, ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿರಾಜು, ನವೀನ್ ಕ್ವಾಲಿಟಿ, ಚಾ.ಹ.ಶಿವರಾಜ್, ನಂಜುಂಡಸ್ವಾಮಿ, ಗು.ಪುರುಷೋತ್ತಮ, ತಾಂಡವಮೂರ್ತಿ, ಚಾ.ಸಿ.ಸಿದ್ದರಾಜು, ರಾಜಪ್ಪ, ಚನ್ನಬಸವಯ್ಯ, ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಿಕೆ ಕಿರಣ್, ರಾಜೇಶ್, ಗಿರಿ, ಚಂದ್ರು, ಮಧು, ಸ್ವಾಮಿ, ಪ್ರಭು, ಮಂಜು, ಸತೀಶ್, ಕುಮಾರ್, ಅನುಶ್ರೀ, ಭಾಗ್ಯಮ್ಮ, ಗೀತಾ, ಸುಮ, ಮಂಜು, ರತ್ನಮ್ಮ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *