ವೀಣಾ ಶ್ರೀಕಾಂತ್
Childhood anxieties, childhood fears, never disappear entirely. They fade, but not away….
ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ… ಆಟದೆ ಸೋತು, ರೋಷದೆ ಕಚ್ಚಿದ; ಆಟದೆ ಸೋತು, ರೋಷದೆ ಕಚ್ಚಿದ ಗಾಯವ ಮರೆತಿಲ್ಲ ಅಹ ಅಹ!
ಅದೆಷ್ಟು ಚೆಂದ ಆ ಬಾಲ್ಯ…those innocent days never to return !!!ಕಣ್ತುಂಬ ಕನಸು. ಕನಸುಗಳದೇ ಲೋಕ….ತುಂಬಿತುಳುಕುವ ಆತ್ಮವಿಶ್ವಾಸವೊಂದೇ ಸಾಕು, ಕುಂಟನನ್ನೂ ನದಿ ದಾಟಿಸೀತು!
ಬಾಲ್ಯ ಕಳೆದೆ ಹೋಗಿದೆ
ಕಳೆದ ಬಾಲ್ಯದ ನೆನಪು ಮತ್ತೆ ಮತ್ತೆ ಕಾಡ್ತಾ ಇದೆ ..
Broken pencils and unfilled home works were better than
broken hearts and unfilled thoughts !!
ಕಪ್ಪು ಬಿಳುಪಿನ ಕಣ್ಣುಗಳಲ್ಲಿ colorful ಕನಸುಗಳು..

ಈಗಿನ ಮಕ್ಕಳಂತೆ ಹೆಣಬಾರದ ಪುಸ್ತಕಗಲ್ಲನ್ನು ನಾವುಗಳು ಕೊಂಡೊಯ್ಡಿರಲಿಲ್ಲಾ
smart phones, computerಗಳ ಹಂಗೆ ಇಲ್ಲದೆ ಅಮ್ಮ ಕೂಗೋ ವರ್ಗೂ ಆಟದ ಗುಂಗಿನಲ್ಲೇ ಇರ್ತಿದ್ವಿ…
ಜಾತ್ರೆಯಲ್ಲಿ ಕೊಳ್ಳುತ್ತಿದ್ದwatch ಗಳು, ಪಿಂಕ್ ಮಿಟಾಯಿಗಳು, ಜಡೆಗೆ ಹಾಕುವ ಬಣ್ಣ ಬಣ್ಣದ ಟೇಪ್ಗಳು ಇದೆ ಚಿಕ್ಕ ಚಿಕ್ಕ ಕುಶಿಗಳೇ ದೊಡ್ಡಡೆನಿಸುತ್ತಿತು..
ನಮ್ಮ ಭಾವನೆಗಲ್ಲನ್ನು ಹಂಚಿಕೊಳ್ಳಲು ನಾವು mobile phone ಉಪಯೊಗಿಸುತ್ತಿರಲಿಲ್ಲ
ನಮ್ಮ ನೆಂಟರಿಷ್ಠರ ಮನೆಗೆ, ಅಜ್ಜಿ ಮನೆಗೆ ಇಷ್ಠ ಆದಾಗ ಹೋಗಿ ಬರೋ ರೂಢಿ ಇತ್ತು..ಅದಕ್ಕೆ permission ಬೇಕಿರಲಿಲ್ಲ…
ಹೊಸ ಪುಸ್ತಕದಲ್ಲಿ ನವಿಲುಗರಿ ಇಟ್ಕೊಂಡ್ರೆ ಪಾಸ್ ಆಗ್ತಿವಿ ಅನ್ನೋ ಹುಚ್ಚು ಕಲ್ಪನೆಗಳು…ಈಗ ನೆನೆದರೆ ನಗು ಉಕ್ಕಿ ಉಕ್ಕಿ ಬರತ್ತೆ ಆದರೆ ಆ ನೆನಪಿನ ನವಿಲುಗರಿ ಎಂದಿಗೂ ಆತ್ಮೀಯವೇ ….

ನಗೊಂತರ ಹುಚ್ಚು ಹವ್ಯಾಸ.. ಏನಪ ಅಂದ್ರೆ.ಯಾರ್ ನಂಗೆ ಏನೇ ಕೊಡಲಿ..ಅದ್ನ ಭದ್ರವಾಗಿ..ಇಟ್ಕೋಳೋದು..ಯಾಕಂದ್ರೆ ಅವೆಲ್ಲ…ಒಂದೊಂದು ನೆನಪಿನ ಕತೆ ಹೇಳುವ…ವಸ್ತುಗಳು.. ಗೆಳತಿಯರು ಕೊಟ್ಟ ಗ್ರೀಟಿಂಗ್ಸ್..ಆಲದಮರದ ಎಲೆ….ಎಲ್ಲ ಎಲ್ಲವು ನನ್ನ ಬಳಿ ಈಗಲೂ ಇದ್ದಾವೆ..
ಬಾಲ್ಯವೇ ಹಾಗೆ… ತಪ್ಪು ಸರಿ ಗೊತ್ತಿಲ್ಲದ..ದಿನಗಳು..ಬರಿ ಮೋಜು ಮಸ್ತಿಗೆ..ಹತೊರಿಯುತಿದ್ದ ಕ್ಷಣಗಳು….
ತುಂಬ ಸಡಗರದಿಂದ ಕಳಿತಿದ್ದ ದಿನ ಅವು…ಮತ್ತೆಂದು ಬರಲಾಗದ.. ಬಯಸಿದರು ಸಿಗಲಾರದ ಮಧುರ ದಿನಗಳು ಅವು…
ಗೆಳತಿಯರು ಕೊಟ್ಟ ನವಿಲಗರಿ…ಸಾವಿರ ನೆನಪನ್ನ ಮನಸಲ್ಲಿ ಹೊತ್ತು ತರುತಿದೆ…ಈಗಲೂ ಜೋಪಾನ..ಮಾಡಿ..ಇಟ್ಟಿದಿನಿ ಮುಂದೆನು..ಇಟ್ಟಿರ್ತೀನಿ ಮನಸಿನ ಪುಟಗಳ ನಡುವೆ ನೆನಪೆಂಬ ನವಿಲುಗರಿ..ನಮ್ಮ ಸ್ನೇಹದ ಗುರುತು …
ನವಿಲುಗರಿ ಮರಿ ಹಾಕುತ್ತೆ ಅನ್ನೋ ಹುಚ್ಚು ಕಲ್ಪನೆ…ಮರಿ ಹಾಕಿದ ಮೇಲೆ ನಿನಗೂ ಕೊಡ್ತೀನಿ ಅನ್ನೋ ಬರವಸೆ.. ನವಿಲುಗರಿ ಮರಿ ಹಾಕಲ್ಲ ಗೆಳತಿ ನೀನು ಸಿಗೋಲ್ಲ…ಬರಿ ನೆನಪು ಮಾತ್ರ…
ಸ್ನೇಹದಲ್ಲಿ ಎಲ್ಲವು ಚೆಂದ
ಬನ್ನಿ ಆತ್ಮೀಯರೇ ಮತ್ತೆ ಅದೇ ಚಿಕ್ಕವಯಸಿನ ಮಕ್ಕಳಾಗಿ..
ಕೊನೆಯ ಬೆಂಚಿನ ಕಿಟಕಿಯ ಪಕ್ಕ ಕೂತು ನೆಲ್ಲಿಕಾಯಿ, ಹುಣಸೆ ಹಣ್ಣು, ತಿನ್ನೋಣ..
ಸವಿ ನೆನಪುಗಳು ಬೇಕು ಸವಿಯಲಿ ಬದುಕು.. ..
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..ಪಯಣಿಗಳು ನಾನೆ..ನಾವಿಕಳು..ನಾನೆ..
