ಚಾಮರಾಜನಗರ: ಬೋಧನೆ ಮತ್ತು ಕಲಿಕೆ ಪ್ರಗತಿಗೆ ಹಾಗೂ ಶೈಕ್ಷಣಿಕ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸಲು ಚಾಮರಾಜನಗರ ವಿವಿ ಕುಲಪತಿ ಪ್ರೊ. ಎಂ.ಆರ್.ಗಂಗಾಧರ್ ಹಾಗೂ ಯೂರೋಪಿಯನ್ ಅಂತರಾಷ್ಟ್ರೀಯ ವಿವಿ ನಿರ್ದೇಶಕ ತರ್ನ್ಟಿಪ್ ಕಾಂಗ್ಟೆವೆತ್, ಐದು ವರ್ಷಗಳ ಅವಧಿಗೆ ಥೈಲ್ಯಾಂಡ್ನ ಬ್ಯಾಂಕಾಕ್ ನಲ್ಲಿರುವ ಪ್ಯಾರಿಸ್ ಫ್ರಾನ್ಸ್, ಯುರೋಪಿಯನ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಕೇಂದ್ರ ಕಛೇರಿಯಲ್ಲಿ ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದರು.

ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ವಿನಿಮಯ ಮಾಡಿಕೊಳ್ಳುವುದರ ಮೂಲಕ ಶೈಕ್ಷಣಿಕ ಸಹಕಾರವನ್ನು ಉತ್ತೇಜಿಸುವುದು ಮತ್ತು ಕಲಿಕೆಗಾಗಿ ಬೋಧನೆಗೆ ಅಧ್ಯಾಪಕರ ಪರಿಣತಿಯನ್ನು ಪರಸ್ಪರ ವಿನಿಮಯದ ಮೂಲಕ ಬೋಧನೆ ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.
ಇದರಿಂದ ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಸೀಗುವುದಲ್ಲದೆ ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದೇಶದಲ್ಲಿ ಕೇಲವು ವಿಶೇಷ ಕೋರ್ಸ್ಗಳನ್ನು ಯುರೋಪಿಯನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಅಡಿಯಲ್ಲಿ ಮಾಡಲು ಅವಕಾಶವಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ಆರ್.ಗಂಗಾಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.