ಚಾಮರಾಜನಗರ: ಜನಪದ ಸಿರಿ ಕನ್ನಡ, ಈಶ್ವರಿ ಸೋಷಿಯಲ್ ಟ್ರಸ್ಟ್ ಮತ್ತು ಸುಮಧುರ ಮ್ಯೂಜಿಕಲ್ ಟ್ರಸ್ಟ್ ಸಹಯೋಗದಲ್ಲಿ ಆರ್.ರವಿಕುಮಾರ್ ಕುಮಾರನಪುರ ಅವರ ನಿಯೋಗ ಕಥಾ ಸಂಕಲನ ಲೋಕಾರ್ಪಣೆ ಹಾಗೂ ಅಂತರಾಷ್ಟ್ರೀಯ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅವರಿಗೆ ಅಭಿನಂದನಾ ಸಮಾರಂಭವು
ಮಾ. 7 ರಂದು ನಗರದಲ್ಲಿ ನಡೆಯಲಿದೆ ಎಂದು ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ .ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಉದ್ಘಾಟಿಸಲಿದ್ದಾರೆ. ಜನಪದ ಸಿರಿ ಯೂಟ್ಯೂಬ್ ಚಾನಲ್ ಸಂಪಾದಕ ಜರಗನಹಳ್ಳಿ ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಕೃತಿ ಲೋಕಾರ್ಪಣೆ ಮಾಡುವವರು.ಸಾಹಿತಿ ಬಿ.ಎಸ್.ವಿನಯ್ ಕೃತಿ ಕುರಿತು ಮಾತನಾಡುವವರು.ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಎಸ್.ಬಾಲರಾಜು, ಸಾಹಿತಿ ಸೋಮಶೇಖರ ಬಿಸಲ್ವಾಡಿ, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್ ಹಾಗೂ ಇತರರು ಭಾವವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಕುರಿತು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜನಪದ ಸಿರಿ ಯೂಟ್ಯೂಬ್ ಚಾನಲ್ ಸಂಪಾದಕ ಜರಗನಹಳ್ಳಿ ಕಾಂತರಾಜು, ಗಾಯಕ ಮಹೇಂದ್ರ , ಕರ್ನಾಟಕ
ಲಿಲತಕಲಾ ಅಕಾಡೆಮಿಯ ಮಾಜಿ ಸದಸ್ಯ ದಂಡು ಯಳಂದೂರು ಹಾಜರಿದ್ದರು.