ಮ. ನರೇಗಾ ಕುರಿತ ಮಾಹಿತಿ, ದೂರುಗಳಿಗೆ ಉಚಿತ ಸಹಾಯವಾಣಿ ಲಭ್ಯ

ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಸೌಲಭ್ಯಗಳು, ಮಾಹಿತಿ ಪಡೆಯಲು ಹಾಗೂ ದೂರು, ಸಮಸ್ಯೆಗಳನ್ನು ತಿಳಿಸಲು ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಉಚಿತ ಸಹಾಯವಾಣಿ 08226-224015 ಸೌಲಭ್ಯ ಲಭ್ಯವಿದೆ.

ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಚೀಟಿ ನೊಂದಣಿ, ಗ್ರಾಮಿಣ ಜನರ ಉದ್ಯೋಗ ಬೇಡಿಕೆ, ಕೂಲಿ ಪಾವತಿ, ವೈಯಕ್ತಿಕ ಸೌಲಭ್ಯಗಳ ಮಾಹಿತಿಗಳನ್ನು ಉಚಿತ ಸಹಾಯವಾಣಿ ಮೂಲಕ ಪಡೆಯಬಹುದಾಗಿದೆ. ಅಲ್ಲದೆ ದೂರುಗಳನ್ನು ಸಹ ಸಲ್ಲಿಸಬಹುದಾಗಿದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಕಚೇರಿ ಅವಧಿಯಲ್ಲಿ ಉಚಿತ ಸಹಾಯವಾಣಿ ಸಂಪರ್ಕಿಸಿ ಉದ್ಯೋಗ ಖಾತರಿ ಯೋಜನೆ ಕುರಿತ ಮಾಹಿತಿ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *