ಮಹಾತ್ಮ ಗಾಂಧಿಜೀಯವರ ಜೀವನವೇ ಒಂದು ಸಂದೇಶ : ಎಡಿಸಿ ಗೀತಾಹುಡೇದ

ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜೀಯವರ ಜೀವನವೇ ಒಂದು ಸಂದೇಶವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಅಭಿಪ್ರಾಯಪಟ್ಟರು.

ನಗರದ  ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ  ವತಿಯಿಂದ ವಿಶ್ವ ಮಹಾನ್  ನಾಯಕ, ಅಹಿಂಸಾವಾದಿ,  ರಾಷ್ಟ್ರಪಿತ ಮಹಾತ್ಮ ಗಾಂದೀಜಿರವರ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಸರಳ ಜೀವನ ಮೈಗೂಡಿಸಿಕೊಂಡ ಇಡೀ ಜೀವನವನ್ನೇ ಸ್ವಾತಂತ್ರಕ್ಕಾಗಿ ತ್ಯಾಗ ಮಾಡಿದ ಮಹಾತ್ಮರು  ಮಹಾತ್ಮಗಾಂಧೀಜಿಯವರು ಜೀವನದಲ್ಲಿ ಸುಳ್ಳನ್ನು ಆಡಬಾರದು, ಯಾವುದೇ ರೀತಿ ಹಿಂಸೆಯನ್ನು ಮಾಡಬಾರದು ಎಂದು ಹೇಳಿದ್ದರು ಎಂದರು.

ಇಡೀ ವಿಶ್ವದ ಎಲ್ಲ ಕ್ರಾಂತಿಗಳನ್ನು ನೋಡಿದಾಗ ರಕ್ತಸಿಕ್ತ ಇತಿಹಾಸ ಇದೆ ಆದರೆ ನಮ್ಮ ದೇಶದ ಸ್ವಾತಂತ್ರದ ಇತಿಹಾಸವನ್ನು ನೋಡಿದಾಗ ಅಹಿಂಸಾ ತತ್ವದ ಮೂಲಕ ಸ್ವಾತಂತ್ರವನ್ನು ಪಡೆಯಬಹುದು ಎಂಬುವುದನ್ನು ಎತ್ತಿ ತೋರಿಸುತ್ತದೆ. ಸತ್ಯ, ಅಹಿಂಸೆ, ಶಾಂತಿ ಮೊದಲಾದ ತತ್ವಗಳನ್ನು ನೀಡಿ ಉತ್ತಮ ಬದುಕಿನ  ದಾರಿ ತೋರಿದ ವಿಶ್ವ ಶಾಂತಿದೂತರಾದ ಮಹಾತ್ಮಗಾಂಧೀಜಿಯವರ ತತ್ವ, ಆದರ್ಶಗಳನ್ನು ನಿತ್ಯಜೀವನದಲ್ಲಿ ಪಾಲಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಅಖಿಲ ಕರ್ನಾಟಕ  ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ,  ನಮ್ಮ ಚಳವಳಿಗೆ ಗಾಂದೀಜಿಯರೇ ನಮಗೆ ಸ್ಪೂರ್ತಿಯಾಗಿದ್ದಾರೆ.  ಅಹಿಂಸಾ ತತ್ವಗಳ ಮೂಲಕ ಬ್ರಿಟಿಷರ ವಿರುದ್ದ ಹೋರಾಟ ಮಾಡಿದರು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ದೇಶದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದಂತಹ ಸಂದರ್ಭದಲ್ಲಿ  ಮೊಟ್ಟಮೊದಲು ಹೋರಾಟ ಮಾಡುವುದೇ ಚಾಮರಾಜನಗರದಲ್ಲಿ. ಗಡಿಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿ ಉಳಿದಿರುವುದು ನಮ್ಮ ಹೋರಾಟದಿಂದಲ್ಲೇ ಎಂದರು.

ಅಧ್ಯಕ್ಷತೆ ವಹಿಸಿದ ಶಾ.ಮುರಳಿ  ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ , ಸಾವರ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವ ವ್ಯಕ್ತಿಗಳ ವಿರುದ್ದ  ಗೂಂಡಾ ಕಾಯ್ದೆ, ರಾಷ್ಟ್ರದ್ರೋಹ ಕಾಯ್ದೆ  ಪ್ರಕರಣ ದಾಖಲಿಸಿ. ಜೈಲಿಗೆ ಕಲಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಡಾ.ಮಾರುತಿ,  ನಗರಸಭಾ ಕಂದಾಯಾಧಿಕಾರಿ ಶರವಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ   ಪೌರಾಯುಕ್ರ ರಾಮದಾಸ್, , ಕಸಾಪ ಜಿಲ್ಲಾಧ್ಯಕ್ಷ  ಶೈಲೇಂದ್ರಕುಮಾರ್,ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ  ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಾತನಾಡಿದರು.

ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್,  ಪಣ್ಯದಹುಂಡಿರಾಜು, ನಿಜಧ್ಬನಿಗೋವಿಂದರಾಜ್,ಮಹೇಶ್ ಗೌಡ, ಕೆ.ಎಂ.ನಾಗರಾಜು, ಸುರೇಶ್ ಗೌಡ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *