ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ರವರ 67ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ರಾಮಸಮುದ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ಮೊಂಬತ್ತಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ಯಜಮಾನರು ಹಾಗೂ ಮುಖಂಡರು. ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೊಂಬತ್ತಿ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ಬುದ್ದ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಯಜಮಾನರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಹಳ ಬಡತನದಲ್ಲಿ ಹುಟ್ಟಿ ಪರಿಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿ, ಸಮಾಜ ಮತ್ತು ದೇಶದ ಅಭಿವೃದ್ದಿಗಾಗಿ ಸಂವಿಧಾನವನ್ನು ರಚನೆ ಮಾಡಿಕೊಟ್ಟರು. ಅವರು ನೀಡಿದ ಸಂವಿಧಾನ ದೇಶದ ಬಹುದೊಡ್ಡ ಗ್ರಂಥವಾಗಿದೆ. ತುಳಿದಕ್ಕೊಳದವರು ಹಾಗೂ ಕಟ್ಟಕಡೆಯ ವ್ಯಕ್ತಿಯು ಸಹ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವಂತಹ ವಾತಾವರಣವನ್ನು ಸಂವಿಧಾನದ ಮೂಲಕ ನಮಗೆ ಕಲ್ಪಿಸಿಕೊಟ್ಟರು. ಅವರ ಅಶಯದಂತೆ ಶಿಕ್ಷಣ ಪಡೆದು ಉನ್ನತ ಉದ್ಯೋಗಳನ್ನು ನಮ್ಮದಾಗಿಸಿಕೊಂಡು ದೇಶವನ್ನು ಆಳುವ ದಿಕ್ಕಿನಲ್ಲಿ ನಾವೆಲ್ಲರು ಸಾಗೋಣ ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಆರ್.ಎನ್.ಸುಹಾಸ್, ಉಪಾಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಮನೋಜ್ ಮಸು, ಸಂಘದ ಸದಸ್ಯರಾದ ನಿತಿನ್, ಕಾರ್ತಿಕ್, ಮಹೇಶ್ ಚಂದ್ರು, ಬಾಬು, ಯಜಮಾನರಾದ ಚನ್ನಂಜಯ್ಯ, ರೇವಣ್ಣ, ಮಹದೇವಯ್ಯ, ಮಾಜಿ ನಗರಸಭಾ ಸದಸ್ಯ ಬಿ.ನಾಗರಾಜು, ದಿವ್ಯ ಚೇತನ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎಂ.ನಾಗರಾಜು ಹಾಗೂ ಸರ್ಕಾರಿ ನೌಕರರು ಹಾಗು ರಾಮಸಮುದ್ರದ ಕಲಾವಿದರು ಭಾಗವಹಿಸಿದ್ದರು.
ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ರವರ 67ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಚಾಮರಾಜನಗರ ಸಮೀಫದ ರಾಮಸಮುದ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ಮೊಂಬತ್ತಿ ಮೆರವಣಿಗೆ ಮಾಡಲಾಯಿತು.