ಚಾಮರಾಜನಗರ: ನಗರದ ಡಿವಿಯೇಷನ್ ರಸ್ತೆಯ ತಿರುವಿನಲ್ಲಿ ಸೋಲರ್ ಪ್ಲೇಟ್ ತುಂಬಿದ್ದ ಲಾರಿಯೊಂದು ಪಲ್ಟಿ ಹೊಡೆದಿದ್ದು, ಚಾಲಕ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹರಿಯಾಣ ಮೂಲದ ಲಾರಿಯೊಂದು ಸೋಲರ್ ಪ್ಲೇಟ್ಸ್ಗಳನ್ನು ತುಂಬಿಕೊಂಡು ತಮಿಳುನಾಡಿಗೆ ತೆರಳುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಹಾಗೂ ಕ್ಲೀನರ್ ಹೊರಗಡೆಗೆ ಜಿಗಿಯುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ೧ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.