ಮರಿಯಾಲದಲ್ಲಿ ಗುರುಬಸವ ವಚನ ಪಾಠಶಾಲೆ ಉದ್ಘಾಟನೆ
ಚಾಮರಾಜನಗರ, ಆ. 1- ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೂ ಶೇಷ್ಠವಾದ ಸಾಹಿತ್ಯವನ್ನು ನೀಡಿದೆ ಎಂದು ಕನ್ನಡಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಅವರು ಹೇಳಿದರು.
ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಶ್ರೀಮಠದ ಶ್ರೀ ಬಸವ ವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಗುರುಬಸವ ವಚನಪಾಠಶಾಲೆ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯದಲ್ಲಿ ಶ್ರೇಷ್ಠ ಗುಣಗಳಿದ್ದು, ವಚನ ಸಾಹಿತ್ಯ ರಚನೆ ಮಾಡಿದವರು ಯಾರು ಕೂಡ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದವರಲ್ಲ, ಬಸವಾದಿ ಶರಣರು ತಮ್ಮ ಅನುಭವದಿಂದ ಕಟ್ಟಿಕೊಟ್ಟಂತ ವಚನಗಳಾಗಿವೆ. ಇದು ಜನಸಾಮಾನ್ಯರಿಂದ ಸೃಷ್ಠಿಯಾದ ಸಾಹಿತ್ಯವಾಗಿದೆ ಎಂದರು.
ವಚನ ಸಾಹಿತ್ಯ ಎಂದರೆ ಜೀವನ ವಿಧಾನ, ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾದ ತತ್ವಗಳು ವಚನ ಸಾಹಿತ್ಯದಲ್ಲಿದೆ. ವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಕರ್ನಾಟಕಕ್ಕೆ ಅμÉ್ಟೀ ಅಲ್ಲ ವಿಶ್ವಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದೆ ಎಂದರು.
ವಚನ ಸಾಹಿತ್ಯದಲ್ಲಿ ಸರ್ವಧರ್ಮ ಕಲ್ಪನೆ ಇದ್ದು, ವಚನ ಚಳುವಳಿಯ ಮೂಲಕ ಸರ್ವರೂ ಸಮಾನರು ಶ್ರೀ, ಪುರುಷ, ಬಡವ-ಬಲ್ಲಿಗ ಎಲ್ಲರೂ ಒಂದೇ ಎಂಬ ತತ್ವವನ್ನು ಬಸವಣ್ಣವರು ಸಾರಿದ್ದಾರೆ ಎಂದರು.
12ನೇ ಶತಮಾನದ ವಚನ ಸಾಹಿತ್ಯ ಪ್ರಸ್ತುತ ಜೀವನಕ್ಕೆ ಬೇಕಾದ ಎಲ್ಲಾ ಅಂಶಗಳು ಅಡಕವಾಗಿದ್ದು, ಪ್ರತಿಯೊಂದು ವಚನಗಳು ಸಮಾಜಕ್ಕೆ ಸಂದೇಶವನ್ನು ಕೊಟ್ಟಿದ್ದು, ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯವನ್ನು ಪ್ರತಿಯೋಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಚನಗಳನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದರು.
ಯುವಜನರಿಗೆ ಸರಿಯಾದ ಮಾರ್ಗದರ್ಶನ ಸಿಗದಿರುವುದರಿಂದ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಗುರುಗಳ ಸರಿಯಾದ ಮಾರ್ಗದರ್ಶನದಿಂದ ಗುರು ಹಿರಿಯರಿಗೆ ಗೌರವ ತರುವಂತ ಕೆಲಸವನ್ನು ಮಾಡಬೇಕು, ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆದವರು ಯಾರು ಕೂಡ ಟಿವಿ ಮೊಬೈಲ್ಗಳನ್ನು ಬಳಸದವರೇ ಮೊಬೈಲ್ನಿಂದ ದೂರವಿರಬೇಕು, ವಚನಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ವಚನಗಳು ಒಳ್ಳೇಯ ಸಂಸ್ಕøತಿ ಪರಂಪರೆಯನ್ನು ಕಲಿಸುತ್ತದೆ ಎಂದರು.
ಗೂಗಲ್ನಿಂದ ಸಿಗುವ ಮಾಹಿತಿ ಕ್ಷಣಿಕ ಮಾತ್ರ, ಪುಸ್ತಕ ಓದುವುದರಿಂದ ಜ್ಞಾನ ಶಾಶ್ವತವಾಗಿ ಉಳಿಯಲಿದೆ. ವಚನ ಸಾಹಿತ್ಯಗಳನ್ನು ಓದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಮೈಸೂರು ಶಿಕ್ಷ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಸಾಹಿತಿ ಶರಣ ದೇವರಾಜು ಪಿ. ಚಿಕ್ಕಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಪಾಠಶಾಲೆ ದಕ್ಷಿಣ ಕರ್ನಾಟಕದಲ್ಲೇ ಸ್ಥಾಪನೆ ಮಾಡಿದ ಮೊದಲ ಶಾಲೆ ಎಂಬ ಕೀರ್ತಿ ಮರಿಯಾಲ ಶ್ರೀಮಠಕ್ಕೆ ಸಲ್ಲುತ್ತದೆ. ಸುವರ್ಣ ಅಕ್ಷರಗಳಲ್ಲಿ ಬರೆಯಲಿದೆ ಎಂದರು.
ವಚನ ಪಾಠಶಾಲೆಯನ್ನು ಅಧ್ಯಯನಕ್ಕೆ ಅμÉ್ಟೀ ಅಲ್ಲ, ವಚನಗಳಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಅಗತ್ಯವಾಗಿದೆ. ವಚನ ಸಾಹಿತ್ಯದ ಮೂಲ ಪುರುಷ ಬಸವಣ್ಣ. ವಚನದ ಬೇರು ಬಸವಣ್ಣ ಅವರನ್ನು ಮರೆಯಬಾರದು ವಚನ ಪಾಠಶಾಲೆಯಲ್ಲಿ ಕಲಿತ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಸಂಸ್ಕೃತ ಸಮಾಜಕ್ಕೆ ಪಾಲುದಾರರಾಗಬೇಕು ಎಂದರು.
ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸಂಸ್ಕೃತ ಪಾಠ ಶಾಲೆಗಳನ್ನು ಕೇಳಿದ್ದೇನೆ ವಚನ ಪಾಠಶಾಲೆ ಎಂಬುದನ್ನು ಕೇಳೇ ಇರಲಿಲ್ಲ, ಪ್ರಸ್ತುತದಲ್ಲಿ ವಚನ ಪಾಠಶಾಲೆಗಳು ಅತ್ಯಗತ್ಯವಿದೆ ಎಂದರು.
ಚಿಕ್ಕವಯಸ್ಸಿನಲ್ಲಿ ಬಸವ ಶರಣರ ವಚನಗಳನ್ನು ತಲೆಗೆ ತುಂಬಿದರೆ ಮಕ್ಕಳಿಗೆ ವಚನಗಳ ಅಭ್ಯಾಸ ಮಾಡಿಸಿದರೆ ಅವರು ಉನ್ನತವಾದ ಬದುಕನ್ನು ಬದುಕಲು ಸಾಧ್ಯವಾಗುತ್ತದೆ ಎಂದರು.
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಕೆ.ಸಿ ಬಸವಣ್ಣ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಗತ್ಯವಿದ್ದು, ವಚನಗಳು ಸಂಸ್ಕಾರವನ್ನು ಕೊಡಲಿದೆ ಧಾರ್ಮಿಕ ಸಂಸ್ಥೆಗಳಲ್ಲಿ ವಚನ ಪಾಠಶಾಲೆಗಳು ಪ್ರಾರಂಭವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪೆÇ್ರ. ಎಂ.ಆರ್. ಗಂಗಾಧರ ಹಾಗೂ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಸಿದ್ದಣ್ಣ ಲಂಗೋಟಿ ಅವರು ಮಾತನಾಡಿದರು.
ಮರಿಯಾಲ ಮುರುಘರಾದೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಆಶಿರ್ವಚನ ನೀಡಿದರು.