ಚಾಮರಾಜನಗರ: ನಗರದ ಭ್ರಮರಾಂಬ ಬಡಾವಣೆಯಲ್ಲಿರುವ ಶ್ರೀಅಕ್ಷಯ್ಶ್ರೀ ಸೌಹಾರ್ದ ಕ್ರೆಡಿಟ್ ಕೋ.ಲಿ ನ 2024ನೇ ವರ್ಷದ ದಿನದರ್ಶಿಕೆಯನ್ನು ವಾಟಾಳು ಸೂರ್ಯ ಸಿಂಹಾಸೀನ ಮಠಾಧ್ಯಕ್ಷರಾದ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಬಿಡುಗಡೆ ಮಾಡಿದರು.
ವಾಟಾಳ್ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ಸೌಹಾರ್ದ ಸಂಘದ 2024ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಸಹ ಒಂದು ಪುಣ್ಯದ ಕೆಲಸವಾಗಿದೆ. ಸಹಕಾರ ಸಂಘಗಳು ಪರಸ್ಪರ ಒಬ್ಬರಿಗೊಬ್ಬರ ಅಭಿವೃದ್ದಿಯನ್ನು ಬಯಸಿ ರಚನೆಗೊಳ್ಳುತ್ತವೆ. ಸೌಹಾರ್ದ ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷರಾದ ಕೆ. ವೀರಭದ್ರಸ್ವಾಮಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಹಳಷ್ಟು ಮಂದಿ ಬಡವರು ಹಾಗೂ ಮಧ್ಯಮ ವರ್ಗದ ಜನರ ಅಶೋತ್ತರಗಳಿಗೆ ಸ್ಪಂಧಿಸಿ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಘವು ಇನ್ನು ಹೆಚ್ಚಿನ ಅಭಿವೃದ್ದಿಯಾಗಲಿ. ಜಿಲ್ಲೆಯ ವ್ಯಾಪ್ತಿ ಹಾಗೂ ಹೊರ ಜಿಲ್ಲೆಗಳಲ್ಲಿ ಶಾಖೆಗಳನ್ನು ಆರಂಭಿಸುವಂತಾಗಲಿ ಶುಭ ಕೋರಿದರು.
2024ನೇ ವರ್ಷವು ಎಲ್ಲರಿಗೂ ಸನ್ಮಾಂಗಳನ್ನು ಉಂಟು ಮಾಡಲಿ, ಎಲ್ಲರಿಗೂ ಆಯುಷ್ಯ ಆರೋಗ್ಯವನ್ನು ಕರುಣಿಸಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಕೆ. ವೀರಭದ್ರಸ್ವಾಮಿ, ಉಪಾಧ್ತಕ್ಷ ಮರಿಯಾಲ ಸ್ವಾಮಿ, ವಿದ್ಯೋದಯ ಕಾಲೇಜಿನ ಉಪನ್ಯಾಸಕ ಶಿವಕುಮಾರ್, ನಿರ್ದೇಶಕರಾದ ಸಿದ್ದರಾಜು, ಶಿವನಾಗಪ್ಪ, ಆರ್.ಎಸ್. ಮಹದೇವಪ್ಪ, ದೇವರಾಜು, ನಾಗಶೆಟ್ಟಿ, ಕಾಳನಹುಂಡಿ ಕುಮಾರ್, ಮರಿಯಾಲ ಪುಟ್ಟಸ್ವಾಮಿ, ಮುಖಂಡರಾದ ಬಸವಯ್ಯ, ಶುಭೋದಯ ಸಿದ್ದರಾಜು, ಮೊದಲಾದವರು ಇದ್ದರು.