ಚಾಮರಾಜನಗರ: ಆದಿಕವಿ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ನಗರದ 16ನೇ ವಾರ್ಡ್ ನ ರೈಲ್ವೆ ಬಡಾವಣೆಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಬಡಾವಣೆಯ ನೂತನ ನಾಮಫಲಕ ಅನಾವರಣ ಮಾಡಿ ಪುಷ್ಷಾರ್ಚನೆ ಮಾಡಿ ಮಾತನಾಡಿ, ವಾಲ್ಮೀಕಿಯವರ ಅನೇಕ ವಿಚಾರಗಳನ್ನು ಪ್ರಜಾಪ್ರಬುತ್ವ ವ್ಯವಸ್ಥೆಗೆ ಬಗ್ಗೆ ಅವರು ರಾಮಾಯಣದ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವಗಳನ್ನು ಶತಮಾನಗಳ ಹಿಂದೆನೇ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದರು ಎಂದರು.
ರಾಮ ,ಸೀತೆ,ಲಕ್ಷ್ಮಣ ತಂದೆ, ತಾಯಿ ಮಾತನ್ನು ಉಳಿಸುವುದಕೋಸ್ಕರ ಕಾಡಿಗೆ ಹೋದದನ್ನು ರಾಮಾಯಣದಲ್ಲಿ ನಾವು ಕಾಣುತ್ತೇವೆ. ನಾವೆಲ್ಲರೂ ಗುರು-ಹಿರಿಯರನ್ನು, ತಂದೆ-ತಾಯಿಯರನ್ನು ಗೌರವಿಸುವಂತ ಕೆಲಸವನ್ನು ಮಾಡಬೇಕು. ರಾಮಾಯಣದಲ್ಲಿ ಒಂದು ವಿಚಾರವನ್ನು ನಾವೆಲ್ಲರೂ ಗಮನಿಸಬೇಕು. ಲವ-ಕುಶರಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು,ಅವರು ಬಿಲ್ವಿದ್ಯೆಯಲ್ಲಿ ತಂದೆಯನ್ನು ಮೀರಿಸುವಂತಹ ವಿದ್ಯೆಯನ್ನು ವಾಲ್ಮೀಕಿಯರು ಕಲಿಸಿಕೊಟ್ಟಿದ್ದರು. ಬಡಕುಟುಂಬದಲ್ಲಿ ಜನಿಸಿದ ವಾಲ್ಮೀಕಿಯರು ಕಠಿಣ ತಪಸ್ಸಿನ ಮೂಲಕ ಇಡೀ ವಿಶ್ವಕ್ಕೆ ಆದರ್ಶರಾಗಿದ್ದರು. ಅವರ ತತ್ವದಾರ್ಶಗಳನ್ನು ನಾವೆಲ್ಲರೂ ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಎಂದರು. ಇದೇ ಸಂದರ್ಭದಲ್ಲಿಸಿಹಿ,ಅನ್ನಸಂತರ್ಪಣೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣನಾಯಕ, ವೆಂಕಟೇಶ್ ನಾಯಕ, ಗೋಪಾಲ್, ರವಿನಾಯಕ, ಆಟೋಮಂಜುನಾಥ , ಬುಲೆಟ್ ಚಂದ್ರ , ಚಂದ್ರು, ಚಂದ್ರುಶೇಖರ್, ಅರ್ಜುನ್, ಮದನ್, ನವಿನ್, ಶಶಿ, ನಂದಿ, ಚೇತನ್, ಮಣಿ, ನಾಗ, ಸಾಗರ್, ರಾಘು, ಮಣಿಕಂಠ, ಭಕ್ತ, ರೈಲ್ವೆ ಬಡಾವಣೆ ಮುಖಂಡರು ಹಾಜರಿದ್ದರು.