ವಿಷ್ಣು ಸೇನೆ ಗೆಳೆಯರ ಬಳಗದಿಂದ ಡಾ. ವಿಷ್ಣುವರ್ಧನ್ ಅವರು 14 ವರ್ಷದ ಪುಣ್ಯ ಸ್ಮರಣೆ

ಚಾಮರಾಜನಗ: ನಗರದ ಹಳೇ ಖಾಸಗಿ ಬಸ್ ನಿಲ್ಧಾಣದಲ್ಲಿ ಡಾ. ವಿಷ್ಣು ಸೇನಾ ಗೆಳೆಯರ ಬಳಗದಿಂದ ಡಾ. ವಿಷ್ಣುವರ್ಧನ್ ಅವರ 14 ವರ್ಷದ ಪುಣ್ಯ ಸ್ಮರಣೆ ಅಚರಣೆ ಮಾಡಿ, ಅನ್ನ ಸಂರ್ತಪಣೆ ಮಾಡಲಾಯಿತು.

ಮಾರಮ್ಮನ ದೇವಸ್ಥಾನದ ಮುಂಭಾಗ ಶಾಮಿಯಾನ ಹಾಕಿ ಮಧ್ಯಾಹ್ನ 1 ಗಂಟೆಗೆ ಡಾ. ವಿಷ್ಣುವರ್ಧನ್ ಅವರ ಪ್ಲೆಕ್ಸ್‍ಗೆ ದೊಡ್ಡಗಾತ್ರದ ಹೂವಿನ ಹಾರ ಹಾಕಿ ಆಲಂಕಾರ ಮಾಡಿ, ವಿಶೇಷ ಪೂಜೆ ಮಾಡಿದ ಅಭಿಮಾನಿಗಳ ಬಳಗದವರು ವಿಷ್ಣು ಪರ ಜಯಕಾರ ಕೂಗಿದರು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಳಗದ ಸ್ವೀಟ್ ಮಹೇಶ್ ಸಾಹಸ ಸಿಂಹ, ಕನ್ನಡಿಗರ ಕಣ್ಮಣಿ ಡಾ. ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಇನ್ನು ಅಚ್ಚ ಹಸಿರಾಗಿದ್ದಾರೆ.

ವಿಷ್ಣು ವರ್ಧನ್ ಅವರು ನಿಧನರಾಗಿ 14 ವರ್ಷಗಳು ಕಳೆದಿದ್ದು, ರಾಜಧಾನಿ ಹಾಗೂ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ವಿಳಂಬ ಮಾಡುತ್ತಿದ್ದು, ಮುಂದಾದರು ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಜಾಗ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ವಿಷ್ಣು ಗೆಳೆಯರ ಬಳಗದ ರಾಜೇಂದ್ರ, ಸ್ವೀಟ್ ಮಹೇಶ, ಜಗ್ಗಿ, ಮಹೇಶ್, ಮಣಿ, ವಿನಯ್, ಮಹೇಶಹಣ್ಣು, ಮೋಹನ್, ಸೋಮಣ್ಣ, ಚಂದ್ರ ಬುಲೆಟ್, ರಾಜಣ್ಣ ಹಣ್ಣು, ಪವನ್, ನಾಗೇಂದ್ರ, ಆಟೋ ಸುಂದ್ರೇಶ್, ಶಿವನಂಜನಗರಸಭಾ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *