ಚಾಮರಾಜನಗರನ: ತಾಲೂಕಿನ ಕಾಗಲವಾಡಿ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕಿ ಸುಮಾ ಅವರನ್ನ ದಿಢೀರನೆ ಬೇರೆ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರನ್ನು ಇಲ್ಲೇ ಮುಂದುವರೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರಂ ಅವರಿಗೆ ಭಗತ್‍ಸಿಂಗ್ ಯುವ ಸೇನೆ ಹಾಗೂ ಕಾಗಲವಾಡಿ ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಶುಶ್ರೂಷಕಿ ಸುಮಾ ಅವರು ಹಲವು ವರ್ಷಗಳಿಂದ ಕಾಗಲವಾಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾದಂತಹ ಕಠಿಣ ಪರಿಸ್ಥಿತಿ ಸೇರಿದಂತೆ ಮತ್ತಿತರ ಸಂದರ್ಭಗಳಲ್ಲೂ ಸಹ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದಾರೆ.
ಹಾಗಾಗಿ ಶುಶ್ರೂಷಕಿ ಸುಮ ಅವರನ್ನ ಮತ್ತೆ ಕಾಗಲವಾಡಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ನೇಮಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಕಾರ್ಯದರ್ಶಿ ನಾಗೇಶ್ ಮತ್ತು ಕಾಗಲವಾಡಿ ಗ್ರಾಮಸ್ಥರು ಹಾಜರಿದ್ದರು.