ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಸ್ವರ್ಣ ಗೌರಿ ಪ್ರತಿಷ್ಠಾಪನೆ: ಸುಮಂಗಲಿಯರಿಂದ ಬಾಗಿನ ಅರ್ಪಣೆ

ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿರುವ ಶ್ರೀ ಕಾಳಿಕಾಂಬ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬ ಅಂಗವಾಗಿ ವಿಶೇಷವಾಗಿ ಸ್ವರ್ಣ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಸಲಾಯಿತು. ಗೌರಿ ಗಣೇಶ ಹಬ್ಬ ಒಂದೇ ದಿನದ ಕಾರಣದಿಂದ ಒಟ್ಟಿಗೆ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನವನ್ನು ಹೂವಿನಿಂದ ಆಲಂಕೃತಗೊಳಿಸಲಾಗಿತ್ತು. ಸರ್ವಂಲಕೃತವಾದ ಮಂಟಪದಲ್ಲಿ ಶ್ರೀ ಸ್ವರ್ಣ ಗೌರಿಯನ್ನು ಪ್ರಾತಃಕಾಲ 6 ಗಂಟೆಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿಶೇಷವಾಗಿ ಸುಮಂಗಲಿಯರು ಆಗಮಿಸಿ, ಗೌರಿಯನ್ನು ಪೂಜಿಸಿ, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಗೌರಿಯನ್ನು ಪ್ರಾರ್ಥಿಸಿ, ಬಾಗಿನಿ ಅರ್ಪಿಸಿದರು. ನಂತರ 10 ಗಂಟೆಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಸಂಜೆಯವರೆಗೆ ಭಕ್ತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ, ಶ್ರೀ ಕಾಳಿಕಾಂಬ ದೇವಿಯ ದರ್ಶನದ ಜೊತೆಗೆ ಸ್ವರ್ಣಗೌರಿ, ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾಳಿಕಾಂಬ ಟ್ರಸ್ಟ್‍ವತಿ ವತಿಯಿಂದ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.

Leave a Reply

Your email address will not be published. Required fields are marked *