ಸರ್ಕಾರದಿಂದಲ್ಲೇ ಮದಕರಿನಾಯಕರ ಜಯಂತಿ ಆಚರಿಸಲು ಶಿವುವಿರಾಟ್ ಆಗ್ರಹ

ನಗರದಲ್ಲಿ ರಾಜವೀರ ಮದಕರಿನಾಯಕರ ಜಯಂತಿ ಆಚರಣೆ
ಚಾಮರಾಜನಗರ, ಅ. ೧೩- ನಾಡದೊರೆ ಗಂಡುಗಲಿ ಮದಕರಿನಾಯಕರ  ಜಯಂತಿಯನ್ನು ಸರ್ಕಾರದಿಂದಲ್ಲೇ ಆಚರಿಸಬೇಕು ಎಂದು ಯುವ ಮುಖಂಡ ಶಿವುವಿರಾಟ್ ಒತ್ತಾಯಿಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಹಮ್ಮಿಕೊಂಡಿದ್ದ ನಾಡದೊರೆ ರಾಜವೀರ ಮದಕರಿನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದ ಅವರು, ದುರ್ಗದಹುಲಿ ರಾಜವೀರ ಮದಕರಿನಾಯಕರು ನಾಡದೊರೆಯಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅವಧಿಯಲ್ಲಿ ಕೆರೆ, ಕಟ್ಟೆ, ಮಠ, ಮಂದಿರಗಳನ್ನು ನಿರ್ಮಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ ಎಂದರು.

ಮದಕರಿನಾಯಕರು ಯಾವುದೇ ತಂತ್ರಜ್ಞಾನ ವಿಜ್ಞಾನ ವ್ಯವಸ್ಥೆ ಇಲ್ಲದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡಕಲ್ಲು, ಬಂಡೆಗಳನ್ನಿಟ್ಟು ಬೃಹತ್ ಕೋಟೆಗಳನ್ನು ನಿರ್ಮಾಣ ಮಾಡಿರುವುದು ಅದ್ಬುತಗಳಲ್ಲಿ ಒಂದು ಇಂದು ಎಲ್ಲ ರೀತಿಯ ತಂತ್ರಜ್ಞಾನ, ಬೃಹತ್ ಯಂತ್ರೋಪಕರಣಗಳಿದ್ದರೂ  ಅಂತಹ ಕೋಟೆಗಳನ್ನು ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಹಿಂದೂ ಧರ್ಮದ ರಕ್ಷಕರಾಗಿದ್ದರು. ಅವರನ್ನು  ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ  ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಯುವ ಮುಖಂಡರಾದ  ಬುಲೆಟ್ ಚಂದ್ರು,  ಕಿರಣ್,  ಸಿ.ವಿ.ಮಣಿಕಂಠ, ರಾಮಸಮುದ್ರ ಶಿವಣ್ಣ, ಮಹೇಶ್, ರಮೇಶ್ ನಾಯಕ, ಪ್ರವೀಣ್, ರಘು, ಮಹೇಶ್, ಪ್ರದೀಪ್, ನಾಗಚೇತನ್, ಮಣಿನಾರಾಯಣ್, ರಾಕೇಶ್, ರಾಘವೇಂದ್ರ, ಪ್ರವೀಣ್, ಸಂತು, ಪ್ರಸನ್ನ, ಅರ್ಜುನ್,  ಫೃಥ್ವಿ, ಬಸವರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *