ಕನ್ನಡ ಶಾಲೆಗಳು ಉಳಿಯಬೇಕೆಂಬುವುದು ನಮ್ಮ ಉದ್ದೇಶ : ಸಮೀಉಲ್ಲಾ
ಚಾಮರಾಜನಗರ: ತಾಲೂಕಿನ ಕಾಗಲವಾಡಿಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೈಯದ್ ಎಕ್ಸ್ ಪೋರ್ಟ್ ವತಿಯಿಂದ ತಟ್ಟೆ, ಲೋಟ ಹಾಗೂ ನೀರಿನ ಬಾಟಲ್ ವಿತರಿಸಲಾಯಿತು.

ಶಾಲಾವರಣದಲ್ಲಿ ಮಕ್ಕಳಿಗೆ ತಟ್ಟೆ, ಲೋಟ, ನೀರಿನ ಬಾಟಲ್ ವಿತರಿಸಿದ ಸೈಯದ್ ಎಕ್ಸ್ ಪೋರ್ಟ್ ಸಮೀಉಲ್ಲಾ ಮಾತನಾಡಿ, ನಮ್ಮ ಸೈಯದ್ ಎಕ್ಸ್ ಪೋರ್ಟ್ ವತಿಯಿಂದ ತಟ್ಟೆ, ಲೋಟ ಹಾಗೂ ನೀರಿನ ಬಾಟಲ್ ವಿತರಿಸಲಾಗಿದೆ. ಕನ್ನಡ ಉಳಿಯಬೇಕು-ಬೆಳೆಯಬೇಕು. ಕನ್ನ ಶಾಲೆಗಳು ಉಳಿಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಮಾಡಿಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ದಿನಗಳಲ್ಲೂ ಕನ್ನಡ ಶಾಲೆಗಳನ್ನು ಗುರುತಿಸಿ ಸೇವೆ ಮಾಡಲಾಗುವುದು ಎಂದರು.
ನಾನೂ ಕೂಡ ಕನ್ನಡ ಶಾಲೆಯಲ್ಲಿ ಓದಿ ಉದ್ಯಮಿಯಾಗಿದ್ದೇನೆ. ವಿದ್ಯಾರ್ಥಿಗಳು ಖಾಸಗಿ, ಸರ್ಕಾರಿ ಶಾಲೆ ಎಂಬ ತಾರತಮ್ಯವನ್ನಿಟ್ಟುಕೊಳ್ಳದೇ ತಂದೆ, ತಾಯಿ, ಗುರು-ಹಿರಿಯರಿಗೆ ಗೌರವ ಕೊಡುವ ಮೂಲಕ ಶ್ರಮಪಟ್ಟು ಚೆನ್ನಾಗಿ ಓದಿದ್ದರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.
ರವಿಸಂತು ಮಾತನಾಡಿ, ಸಮೀವುಲ್ಲಾ ಅವರು ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದು, ಕನ್ನಡ ಶಾಲೆಗಳ ಪ್ರಗತಿಗೆ ತುಂಬಾ ಹೃಯದದಿಂದ ಸಹಾಯ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ. ಇಂತಹ ಸೇವಾ ಮನೋಭಾವನೆಯುಳ್ಳ ವ್ಯಕ್ತಿಗಳಿಂದ ಗಡಿಜಿಲ್ಲೆಯಲ್ಲೂ ಕನ್ನಡ ಮತ್ತ ಗಟ್ಟಿಯಾಗಲು ಪ್ರೇರಣಿಯಾಗಿದೆ. ಕರ್ನಾಟಕದಲ್ಲಿ ಹುಟ್ಟಿರುವ ನಾವೆಲ್ಲರೂ ಕನ್ನಡಕ್ಕೆ ಒಂದಲ್ಲ ಒಂದು ಕೊಡುಗೆ ನೀಡಬೇಕಿದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ನ ಉಪಪ್ರಧಾನ ವ್ಯವಸ್ಥಾಪಕ ನಿರ್ಮಲ್ಕುಮಾರ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಉದ್ಯಮಿ ಜಬೀಉಲ್ಲಾ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷ ಸುರೇಶ್ಗೌಡ, ಅಧ್ಯಕ್ಷ ಶಿವಣ್ಣ, ಎಸ್.ಆದಿಲ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುದ್ದುಮಲ್ಲು, ಉಪಾಧ್ಯಕ್ಷ ಸುವರ್ಣ, ಸದಸ್ಯ ಸೋಮಣ್ಣ, ಮುಖ್ಯ ಶಿಕ್ಷಕ ಕೆ.ಸಿ. ವಿರೂಪಾಕ್ಷ, ಶಿಕ್ಷಕರಾದ ಎಚ್.ಎಂ.ಧನಂಜಯ್, ಕೆ.ಮಹದೇವಸ್ವಾಮಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.