ಸ್ವದೇಶೀ ವಿಜ್ಞಾನ ಆಂದೋಲನ

ಕರ್ನಾಟಕವು ರಾಜ್ಯ ಮತ್ತು ದೇಶದಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವ ಸದುದ್ದೇಶದಿಂದ 2005ರಿಂದ ಪ್ರತಿ ವರ್ಷ ಒಂದೊಂದು ಪ್ರತಿಷ್ಠಿತ ಸಂಸ್ಥೆ ಮತ್ತು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.

ಪ್ರಸ್ತುತ 17ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ತುಮಕೂರು ವಿಶ್ವವಿದ್ಯಾಲಯದಲ್ಲಿ 2023ರ ಅಕ್ಟೋಬರ್ 27ರಿಂದ 29ರವರೆಗೆ ನಡೆಸಲಾಯಿತು.

ಕೊನೆ ದಿನದ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಮುಂದಿನ ಸಮ್ಮೇಳನ ನೆಡೆಯುವ ಸ್ಥಳ ಮತ್ತು ದಿನಾಂಕ ಘೋಷಣೆ ಮಾಡಲಾಯಿತು.

ಮುಂದಿನ 18ನೇ ಕನ್ನಡ ವಿಜ್ಞಾನ ಸಮ್ಮೇಳನವು 2024ನೇ ಸೆಪ್ಟೆಂಬರ್ 15 ರಿಂದ 17ರವರೆಗೆ ನೆಡೆಸಲಾಗುವುದು ಎಂದು ಸ್ವದೇಶಿ ವಿಜ್ಞಾನ ಆಂದೋಲನದ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಎಂ.ಆರ್. ಗಂಗಾಧರ್ ಅವರಿಗೆ ಸ್ವದೇಶಿ ವಿಜ್ಞಾನ ಆಂದೋಲನದ ಲೋಗೋ ಭಾವಚಿತ್ರವನ್ನು ಕೋಡುವುದರ ಮೂಲಕ ಘೋಷಣೆ ಮಾಡಿದರು.

18ನೇ ಕನ್ನಡ ವಿಜ್ಞಾನ ಸಮ್ಮೇಳನದ ಅಯೋಜನೆಗೆ ಸಕಲ ಸಹಕಾರ ನೀಡುವುದಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಎಂ.ಆರ್.ಗಂಗಾಧರ್ ರವರು ಸಮಾರಂಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ವೆಂಕಟೇಶ್ವರುಲು, ಕುಲಸಚಿವರು ಮತ್ತು ಸ್ವದೇಶಿ ವಿಜ್ಞಾನ ಆಂದೋಲನದ ಪದಾಧಿಕಾರಿಗಳು ಜೊತೆಗೆ ಚಾಮರಾಜನಗರ ವಿಶ್ವವಿದ್ಯಾಲಯದ ಪಿಎಂಇಬಿ ನಿರ್ದೇಶಕರಾದ ಡಾ.ಸಿದ್ದರಾಜು ವಿ.ಜಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಶ್ರೀಹರ್ಷ ಕುಳೆನೂರ್ ರವರು ಸಮಾರಂಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *