ಹರದನಹಳ್ಳಿಯಲ್ಲಿ ವಿಜೃಂಭಣಿಯ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ

ಭಾರತೀಯ ಸಂಪ್ರದಾಯದಲ್ಲಿ ಗಣೇಶನ ಪೂಜೆಗೆ ಹೆಚ್ಚಿನ ಮಹತ್ವ ಇದೆ : ಎಂ.ರಾಮಚಂದ್ರ
ಚಾಮರಾಜನಗರ, ಅ. ೧೫- ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀವಿನಾಯಕ ಭಕ್ತ ಮಂಡಳಿ ಹಾಗೂ ಮೈಸೂರಿನ ಪರ್ಫೆಂಕ್ಟ್ ವೆಂಚರ್ ಸಹಕಾರದಲ್ಲಿ ಗೌರಿ-ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಗ್ರಾಮದ ಶ್ರೀವೇಣುಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತ ಟ್ರಾಕ್ಟರ್‌ನಲ್ಲಿ ಗೌರಿ-ಗಣೇಶ್ ಮೂರ್ತಿವಿಟ್ಟು ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯುವ ಮೂಲಕ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದ ನಾಯಕರ ಬೀದಿಯಲ್ಲಿರುವ ಪುಷ್ಕರಣಿಯಲ್ಲಿ ಬಾಣ ಬಿರುಸುಗಳೊಂದಿಗೆ ವಿಸರ್ಜಸಲಾಯಿತು.

ಮೆರವಣಿಗೆ ಕಲಾತಂಡಗಳ ಮೆರಗು : ಮೆರವಣಿಗೆಯಲ್ಲಿ ಭಾಗವಹಿಸಿದ ನಂದಿಕA¨, ವೀರಗಾಸೆ, ವಾದ್ಯ, ಬ್ಯಾಂಡ್‌ಸೆಟ್, ಹುಲಿವೇಷಧಾರಿಗಳು, ಈಶ್ವರ ವೇಷಧಾರಿ ನೃತ್ಯ ಗಮನ ಸೆಳೆಯಿತು.

ಭಾರತೀಯ ಸಂಪ್ರದಾಯದಲ್ಲಿ ಗಣೇಶನ ಪೂಜೆಗೆ ಹೆಚ್ಚಿನ ಮಹತ್ವ ಇದೆ : ಮೆರವಣಿಗೆ ಚಾಲನೆ ನೀಡಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಭಾರತೀಯ ದೇವರುಗಳಲ್ಲಿ ಅತ್ಯಂತ ಮಂಗಳಕರ ದೇವನೆಂದು ಗಣೇಶನನ್ನು ಪರಿಗಣಿಸಲಾಗಿದ್ದು, ಗಣೇಶನ ಪೂಜೆಗೆ ವಿಶೇಷವಾಗಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

ಹಿಂದೂಧರ್ಮದಲ್ಲಿ ಗಣಪತಿಯು ವಿಘ್ನ ನಿವಾರಕರಾಗಿದ್ದು, ಯಾವುದೇ ಶುಭ ಕಾರ್ಯದ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗೌರಿ-ಗಣೇಶ ಈ ಬಾರಿ ಉತ್ತಮ ಮಳೆ, ಬೆಳೆ ಉಂಟು ಮಾಡಲಿ ಎಂದು ಆಶಿಸಿದರು.

ಮೆರವಣಿಗೆಯಲ್ಲಿ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ.ಮಾಜಿ ಸದಸ್ಯ ರಮೇಶ್, ತಾ.ಪಂ.ಮಾಜಿ ಸದಸ್ಯ ಮಹದೇವಶೆಟ್ಟಿ, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ಪೊಲೀಸ್ ಸಬ್‌ಇನ್‌ಪೆಕ್ಟರ್ ಶ್ರೀಕಾಂತ್, ಗ್ರಾ.ಪಂ.ಮಾಜಿ ಸದಸ್ಯ ಬಿ.ಕುಮಾರ್, ಶ್ರೀವಿನಾಯಕ ಭಕ್ತಮಂಡಳಿ ಪದಾಧಿಕಾರಿಗಳು ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು, ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *