ಚಾಮರಾಜನಗರ: ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಬಸಪ್ಪನಪಾಳ್ಯದ ಆರ್. ರೇವಣ್ಣ ಹಾಗೂ ಕಾರ್ಯರ್ಶಿಯಾಗಿ ಬಿ.ಸಿ. ಪುನೀತ್ ಅವರನ್ನು ನೇಮಕ ಮಾಡಲಾಯಿತು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಗ್ರಾಮಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸಭೆಯ ನಡೆಯಿತು. ಮೈಸೂರು ಜಿಲ್ಲೆ ಸಮಿತಿಯ ಅಧ್ಯಕ್ಷ ಎನ್. ನಾಗರಾಜು, ಸಂಪನ್ಮೂಲ ವ್ಯಕ್ತಿ ರಾಜಾ ಹುಣಸೂರು, ರಾಜ್ಯ ಸಮಿತಿಯ ಸದಸ್ಯ ರಂಗಸ್ವಾಮಿ ನೇತೃತ್ವದಲ್ಲಿ ಸಭೆ ನಡೆದು, ಅಂತಿಮವಾಗಿ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ನೇಮಕಮಾಡಲಾಯಿತು.
ತಾಲೂಕು ಸಂಘದ ಅಧ್ಯಕ್ಷರಾಗಿ ಆರ್. ರೇವಣ್ಣ, ಉಪಾಧ್ಯಕ್ಷರಾಗಿ ರೇವಣ್ಣಸ್ವಾಮಿ, ಮಂಜು, ಕಾರ್ಯದರ್ಶಿಯಾಗಿ ಬಿ.ಸಿ. ಪುನೀತ್, ಖಜಾಂಚಿಯಾಗಿ ಆರ್. ಸುಮಿತ್ರಾ, ಸಂಘಟನಾ ಕಾರ್ಯದರ್ಶಿಗಳಾಗಿ ಪಿ. ಮೂರ್ತಿ, ಡಿ.ಕೆ. ಶಿವಕುಮಾರ್, ಕೆ.ಎಂ. ರೂಪೇಶ್, ಸದಸ್ಯರಾಗಿ ಬಸವಣ್ಣ, ಶಿವಣ್ಣಸ್ವಾಮಿ, ಬಿ. ರೇವಣ್ಣ ಅವರನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷ ಬಸಪ್ಪನಪಾಳ್ಯ ಆರ್. ರೇವಣ್ಣ ಮಾತನಾಡಿ, ಜಿಲ್ಲಾ ಸಮಿತಿ ಹಾಗೂ ಮೈಸೂರು ಜಿಲ್ಲೆಯ ಪದಾಧಿಕಾರಿಗಳು ಮತ್ತು ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಮಹಾ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷನ್ನಾಗಿ ಆಯ್ಕೆ ಮಾಡಿರುವುದಕ್ಕೆ ತುಂಬ ಹೃದಯ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ರಾಜ್ಯ, ಜಿಲ್ಲಾ ಹಾಗೂ ಕೇಂದ್ರ ಸಮಿತಿಯ ಪದಾಧಿಕಾರಿಗಳು ಆಗಮಿಸಿ, ಪೂರ್ಣ ಪ್ರಮಾಣದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಸಂಘಟಿತರರಾಗುವ ಜೊತೆಗೆ ಗ್ರಾಮ ಪಂಚಾಯಿತಿಗೆ ದೊರೆಯುವ ಸಲವತ್ತುಗಳನ್ನು ಹಾಗು ನಮ್ಮ ಹಕ್ಕುಗಳ ಬಗ್ಗೆ ಹೋರಾಟ ಮಾಡೋಣ. ಪಂಚಾಯತ್ ರಾಜ್ ಘೋಷಣೆಯಂತೆ ಗ್ರಾಮ ಪಂಚಾಯಿತಿ ಆಡಳಿತವೇ ಸುಪ್ರೀಂ ಆಗಿದ್ದು, ದೇಶದಲ್ಲಿಯೇ ಪ್ರಥಮವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡಿದ ಅಬ್ದುಲ್ ನಾಜೀರ್ ಸಾಬ್ ಅವರನ್ನು ನಾವೆಲ್ಲರು ಸ್ಮರಿಸಿಕೊಳ್ಳಬೇಕಾಗಿದೆ. ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಗೊಳಿಸುವ ಮೂಲಕ ಗ್ರಾಮಪಂಚಾಯಿತಿಗಳಿಗೆ ಶಕ್ತಿ ತುಂಬಿದರು. ಅವರ ಜಯಂತಿಯು ಡಿ. 25 ರಂದು ತಾಲೂಕು ಮಟ್ಟದಲ್ಲಿ ಆಚರಣೆ ಮಾಡುವ ಜೊತೆಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಅಣ್ಣೇಗೌಡ, ಜಿಲ್ಲಾ ಸಮಿತಿಯ ಸದಸ್ಯ ನಟರಾಜು, ಜಿಲ್ಲಾ ಸಂಚಾಲಕರಾದ ಕೆಂಪರಾಜು, ವೃಷಬೇಂದ್ರ, ಸೈಯದ್ ನಜೀಬುಲ್ಲಾ, ಶೋಭಾ, ಮಹದೇವಸ್ವಾಮಿ ಹಾಗು ಸದಸ್ಯರು ಇದ್ದರು.