ಕುಂಬಾರ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು : ಮಹದೇವಸ್ವಾಮಿ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕುಂಬಾರರ ಕೈಗಾರಿಕಾ ವಿವಿದೋದ್ದೇಶ ಸಹಕಾರ ಸಂಘದ 2024ರ ನೂತನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ನೂತನ ದಿನದರ್ಶಿಕೆಯನ್ನು ಬಿಡುಗಡೆÀ ಮಾಡಿದರು. ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಪಿ. ಮಹದೇವಸ್ವಾಮಿ ಜಿಲ್ಲೆಯಲ್ಲಿ ಕುಂಬಾರ ಸಮುದಾಯದ ಅಭಿವೃದ್ದಿ ಉದ್ದೇಶದಿಂದ 2013 ರಲ್ಲಿ ಸಂಘವನ್ನು ಸ್ಥಾಪನೆ ಮಾಡಲಾಯಿತು. ಸಂಘದ ಹಿರಿಯರು, ಸರ್ಕಾರಿ ನೌಕಕರರು ಉದ್ಯಮಿಗಳು ಹಾಗೂ ಸಮಾಜದ ಬಂಧುಗಳಿಂದ ಷೇರು ಸಂಗ್ರಹಿಸಿ, ಸಂಘ ರಚನೆ ಮಾಡಿಕೊಳ್ಳುವ ಜೊತೆಗೆ ಸ್ವಂತ ಉದ್ಯೋಗವನ್ನು ಹೊಂದಿ ಗುಡಿ ಹಾಗು ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ, ಆರ್ಥಿಕ ಅಭಿವೃದ್ದಿ ಗಾಗಿ ಸಾಲ ಸೌಲಭ್ಯವನ್ನು ನೀಡುತ್ತಾ ಬಂದಿದೆ.
ಅಲ್ಲದೇ ಪ್ರತಿ ವರ್ಷದ ಕ್ಯಾಲೆಂಡರ್ ಪ್ರಕಟಣೆ, ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಸಂಘವನ್ನು ಸಕ್ರಿಯವಾಗಿ ಸಂಘಟನೆ ಮಾಡಿಕೊಂಡು ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಂಘದ ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಹದೇವವಸ್ವಾಮಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಅಸ್ಪತ್ರೆಯ ಅಧೀಕ್ಷಕ ಡಾ. ಗೋವಿಂದಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ವೈದ್ಯರಾದ ಡಾ. ವಿಜಯರಾಘವೇಂದ್ರ ಅವರು ಸಂಘಟನೆ ಹಾಗು ಸಮಾಜದ ಅಭಿವೃದ್ದಿ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್. ರಾಮಶೆಟ್ಟಿ, ನಿರ್ದೇಶಕರಾದ ಎ.ಎನ್. ರಾಜಣ್ಣ, ಆರ್. ಬಸವಣ್ಣ, ವೈ.ಆರ್. ಉಮೇಶ್, ಎಸ್. ಸೋಮಣ್ಣ, ಎನ್. ನಿಂಗರಾಜು, ಕೇಶವಮೂರ್ತಿ, ಕೆ. ಹನುಮಂತಶೆಟ್ಟಿ, ಸಾವಿತ್ರಮ್ಮ, ಎಂ. ಲಕ್ಷಿ, ಡಾ. ಎಂ. ಮಹೇಶ್, ಪಿ ಜವರಶೆಟ್ಟಿ, ಪಿ. ರಾಮಚಂದ್ರ, ಆರ್. ಬಸವಣ್ನ, ಎ.ಎಸ್. ಅರಸು, ಪಿ. ಮಹದೇವಸ್ವಾಮಿ, ಸಂಘದ ಕಾರ್ಯದರ್ಶಿ ಬಿ. ಶಿವಣ್ಣ ಮೊದಲಾಧವರು ಇದ್ದರು.