ಸಹಕಾರಿ ಶಿಕ್ಷಣ ಹಾಗೂ ಕಾಯ್ದೆಗಳ ಜಾಗೃತಿಗೆ ಹೆಚ್ಚಿನ ಒತ್ತು : ನಂಜುಂಡಪ್ರಸಾದ್

ಚಾಮರಾಜನಗರ: ಜಿಲ್ಲೆಯಲ್ಲಿ ಸಹಕಾರ ಶಿಕ್ಷಣ ಮತ್ತು ಸಹಕಾರಿ ಕಾಯ್ದೆಗಳನ್ನು ಬಲಷ್ಟಗೊಳಿಸಿ ಸಹಕಾರಿ ಕ್ಷೇತ್ರದ ಬೆಳೆವಣಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ನಗರದ ಲಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸಹಕಾರ ಮಹಾಮಂಡಲದ ಅಧೀನದಲ್ಲಿ ಜಿಲ್ಲೆಯಲ್ಲಿ ಸಹಕಾರ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗು ಇತರೇ ಸಹಕಾರ ಸಂಘಗಳು ಸೇರಿ 450ಕ್ಕು ಹೆಚ್ಚು ಸಂಘಗಳು ಸದಸ್ಯತ್ವನ್ನು ಹೊಂದಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳೆವಣಿಗೆಗಾಗಿ ಶ್ರಮಿಸುತ್ತಿವೆ. ಇನ್ನುಳಿದ ಸಂಘಗಳು ಸಹ ಷೇರು ಪಡೆದು ಸದಸ್ಯರಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ಸಹಕಾರ ಒಕ್ಕೂಟವನ್ನು ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಬೇಕು ಎಂದರು.

ಜಿಲ್ಲಾ ಸಹಕಾರ ಒಕ್ಕೂಟದಿಂದ ಪ್ರತಿ ವರ್ಷ ಸಹಕಾರ ಶಿಕ್ಷಣ ನಿಧಿಯನ್ನು ಪಡೆದುಕೊಳ್ಲುವ ಜೊತೆಗೆ ಮಹಾ ಮಂಡಲಿಗೆ ಪಾವತಿಸಲಾಗುತ್ತಿದೆ. ಮಹಾಮಂಡಲಿ ನೀಡುವ ಅನುದಾನದಲ್ಲಿ ಜಿಲ್ಲೆಯ ಸಹಕಾರಿಗಳಿಗೆ ಶಿಕ್ಷಣ ಕಾರ್ಯಾಗಾರ, ಸಪ್ತಾಹ ಹಾಗೂ ಸಹಕಾರಿ ಕಾಯ್ದೆಗಳ ತಿದ್ದುಪಡಿ ಸೇರಿದಂತೆ ಲೆಕ್ಕ ಪತ್ರ ನಿರ್ವಹಣೆ ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಆಡಳಿತ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಭವನ ನಿರ್ಮಾಣ ಸೇರಿದಂತೆ ಶಿಕ್ಷಣ ನಿಧಿ ಸಮರ್ಪಕವಾಗಿ ಜಿಲ್ಲೆಯ ವ್ಯಾಪ್ತಿಯ ಸಹಕಾರಿಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ನಂಜುಂಡಪ್ರಸಾದ್ ತಿಳಿಸಿದರು.

ಹಿರಿಯ ಸಹಕಾರಿ ನಿರ್ದೇಶಕರಾದ ಹರದನಹಳ್ಳಿ ಸುಂದ್ರಪ್ಪ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮುಂದಿನ ವರ್ಷದ ವಾರ್ಷಿಕ ಮಹಾಸಭೆಗೆ ಭಾಗವಹಿಸಲು ಸಂಘದಿಂದ ಅನುಮೋದನೆ ಪತ್ರದೊಂದಿಗೆ ಬರಬೇಕು. ಕಾರಣ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರ್ಯಾರು ಎಂಬುವುದು ನಮ್ಮ ಸಿಬ್ಬಂದಿಗಳಿಗೆ ಗೊಂದಲವಾಗುತ್ತಿದೆ. ಹೀಗಾಗಿ ಕಾರ್ಯದರ್ಶಿಗಳು ಅನುಮೋದನೆ ಪತ್ರಗೊಂದಿಗೆ ಸಭೆಗೆ ಕಡ್ಡಾಯವಾಗಿ ಬಂತು ಭಾಗವಹಿಸುವ ಜೊತೆಗೆ ಸಹಿ ಹಾಕಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.

ಸಭೆಯಲ್ಲಿ ಒಕ್ಕುಟದ ಉಪಾಧ್ಯಕ್ಷ ರಾಯಪ್ಪ, ನಿರ್ದೇಶಕರಾದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ನಾಗರಾಜು, ಮುದ್ದಯ್ಯ, ರವಿ, ಪಿ. ಮಹದೇವಸ್ವಾಮಿ, ನಾಗಸುಂದರ್, ಮಹದೇವಪ್ರಭು, ಮಡಿವಾಳಪ್ಪ, ಎಚ್.ಎನ್. ಸುಂದರರಾಜ್, ಎಂ. ಪ್ರಭುಸ್ವಾಮಿ, ದಾಕ್ಷಾಯಿಣಿ, ಜಯಶೀಲಾ, ಮಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *