ಜು. 25, 26 ರಂದು ಪ್ರೌಢಶಾಲಾ ಮುಖ್ಯ ಶಿಕ್ಷಕರ ತತ್ಸಮಾನ ಗ್ರೂಪ್-ಬಿ ವೃಂದದ ಅಧಿಕಾರಿಗಳ ವರ್ಗಾವಣೆ ಕೌನ್ಸೆಲಿಂಗ್

ಚಾಮರಾಜನಗರ: ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದದ ಅಧಿಕಾರಿಗಳ ಕೋರಿಕೆ ಹಾಗೂ ವಿಭಾಗದೊಳಗಿನ ಪರಸ್ಪರ ವರ್ಗಾವಣೆಯ ಪ್ರಕ್ರಿಯೆ ಜುಲೈ ೨೫ ಮತ್ತು ೨೬ ರಂದು ಬೆಳಿಗ್ಗೆ ೯.೩೦ ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.

ಜುಲೈ ೨೫ರಂದು ಬೆಳಿಗ್ಗೆ ೧೦ ಗಂಟೆಗೆ ವಿಭಾಗದೊಳಗಿನ ಕೋರಿಕೆ ವರ್ಗಾವಣೆ ಪರಸ್ಪರ ಕೋರಿಕೆ ವರ್ಗಾವಣೆ ಪ್ರಕ್ರಿಯೆಯು ಆದ್ಯತಾ ಕ್ರಮ ಸಂಖ್ಯೆ ೧ ರಿಂದ ೨೫೨ ವರೆಗೆ ನಡೆಯುವುದು. ಗ್ರೂಪ್ ಬಿ ವೃಂದದ ನಿರ್ದಿಷ್ಟಪಡಿಸಿದ (೩ ರಿಂದ ೫ ವರ್ಷದೊಳಗಿನ) ಕೋರಿಕೆ ವರ್ಗಾವಣೆ ಅಂತರ ವಿಭಾಗದ ಕೋರಿಕೆ ವರ್ಗಾವಣೆ ಪ್ರಕ್ರಿಯೆಯು ಜುಲೈ ೨೬ರಂದು ಬೆಳಿಗ್ಗೆ ಕ್ರಮ ಸಂಖ್ಯೆ ೧ ರಿಂದ ೬೫ ವರೆಗೆ, ಮಧ್ಯಾಹ್ನ ೧ ರಿಂದ ೨೭ ವರೆಗೆ ನಡೆಯಲಿದೆ.

ಕೋರಿಕೆ ಹಾಗೂ ವಿಭಾಗದೊಳಗಿನ ಪರಸ್ಪರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿಯನ್ನು ಶಾಲಾ ಶಿಕ್ಷಣ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *