ಅಬಕಾರಿ ಇಲಾಖೆಯಿಂದ 19,92,989 ರೂ. ಮದ್ಯ ವಶ : ಆರೋಪಿಗಳ ಬಂಧನ

ಚಾಮರಾಜನಗರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 16 ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ಅಕ್ರಮ ಮದ್ಯ ಚಟುವಟುಕೆಗಳನ್ನು ಪತ್ತೆ ಹಚ್ಚಿ ಅಬಕಾರಿ ಕಾನೂನಿನ್ವಯ ಒಟ್ಟು 163 (ಘೋರ-21, ಕಲಂ 15(ಎ)-124, ಬಿಎಲ್ಸಿ-18) ಮೊಕದ್ದಮೆಗಳನ್ನು ದಾಖಲಿಸಿ. 430.920 ಲೀ. ಮದ್ಯ, 6.850 ಲೀ. ಬಿಯರ್ ಹಾಗೂ 17 ವಿವಿಧ ವಾಹನಗಳನ್ನು ಜಪ್ತುಪಡಿಸಿ, 137 ಆರೋಪಿಗಳನ್ನು ಬಂಧಿಸಲಾಗಿದೆ. ಇವುಗಳ ಒಟ್ಟಾರೆ ಅಂದಾಜು ಮೌಲ್ಯ 19,92,989 ರೂ. ಗಳಾಗಿರುತ್ತದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *