- ಧ್ವಜಾರೋಹಣ ನೆರವೇರಿಸಿದ ನಿವೃತ್ತ ಯೋಧ ಅಂತೋಣಿ ರೂಬೆನ್ ಮೋಸೆಸ್
ಚಾಮರಾಜನಗರ: ನಗರದ ರೋಟರಿ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಅಂತೋಣಿ ರೂಬೆನ್ ಮೋಸೆಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮಗೆ 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತರೂ, ದೇಶಕ್ಕೆ ನಮ್ಮದೇ ಆದಂತಹ ಸಂವಿಧಾನವನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವ ಮಾದರಿ ಸರ್ಕಾರ ಜಾರಿಯಾಗಿದ್ದು, 1950ರ ಜನವರಿ 26 ರಂದು ಎಂದು ಗಣರಾಜ್ಯೋತ್ಸವ ಶುಭಾಶಯ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಭಾರತ ಸಂವಿಧಾನದಲ್ಲಿ ಉತ್ತಮ ಆದರ್ಶಗಳು, ಮೌಲ್ಯಗಳನ್ನು ಹೊಂದಿರುವ ಒಂದು ಬೃಹತ್ ಸಂವಿಧಾನವನ್ನು ಅಂಗೀಕರಿಸಿ ಸ್ವತಂತ್ರ ರಾಷ್ಟ್ರವಾಗಿ ಭಾರತ ರೂಪಗೊಂಡಿದೆ. ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಹೊಂದಿದ ಸಾರ್ವಭೌಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ವಿಶೇಷವಾಗಿ
ಭಾರತದ ಸಂವಿಧಾನ ರಚನೆಯಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅವಿಸ್ಮರಣೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥ್‌ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಚಂದ್ರಪ್ರಭಜೈನ್, ಸುರೇಶ್‌ಕುಮಾರ್, ಎಲ್.ನಾಗರಾಜು, ನಾರಾಯಣ್, ಯೋಗರಾಜು, ಡಿ.ನಾಗರಾಜು, ಶ್ರೀನಿವಾಸನ್, ಪ್ರಭಕರ್, ಕಮಲ್‌ರಾಜ್, ಮೋಹನ್, ಪ್ರಕಾಶ್, ಸುಭಾಸ್, ಅಬ್ದುಲ್ ಅಜೀಜ್ ದೀನಾ, ಅಂಕಶೆಟ್ಟಿ, ಡಾ. ಅಭಿಷೇಕ್, ರಾಜಣ್ಣ
ಮಹದೇವಪ್ರಸಾದ್ ಹಾಜರಿದ್ದರು.