ಚಾಮರಾಜನಗರ: ನಗರದ ಹಳೇ ಬಸ್ ನಿಲ್ದಾಣದ ಬಳಿ ರಾಜರತ್ನ ಅಪ್ಪು ಯುವ ಸೇನಾ ಸಮಿತಿಯ ವತಿಯಿಂದ ಕಾಮಧೇನು ಮಿಲ್ಕ್ ಪಾರ್ಲರ್ ಎದುರು ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಮಕ್ಕಳಿಂದ ಕೇಕ್ ಕತ್ತಿರಿಸಿ, ಸಾರ್ವಜನಿಕರಿಗೆ ಚಿಕಿನ್ ಬಿರಿಯಾನಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.

ಸರ್ಕಲ್‍ನಲ್ಲಿ ಅಪ್ಪುವಿನ ಭಾರಿಗಾತ್ರದ ಫೆಕ್ಸ್ ಕಟ್ಟಿ ಪೂಜೆ ಸಲ್ಲಿಸುವ ಜೊತೆಗೆ ಮಕ್ಕಳಿಂದ ಕೇಕ್ ಕತ್ತರಿಸಿ, ಅಪ್ಪುಗೆ ಜಯಕಾರ ಕೂಗಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಯುವ ಸೇನಾ ಸಮಿತಿಯ ಅಧ್ಯಕ್ಷ ಮಂಜಣ್ಣ, ಬಾಲ ನಟರಾಗಿ ಪುನೀತ್‍ರಾಜಕುಮಾರ್ ಉತ್ತಮ ನಟನೆಯ ಮೂಲಕ ಮಕ್ಕಳ ಮನಸ್ಸು ಸೊರೆಕೊಂಡಿದ್ದರು. ನಂತರ ಅಪ್ಪು ಮೂಲಕ ಯುವಕರ ಕಣ್ಮನಿಯಾದರು, ರಾಜಕುಮಾರ್, ಯುವರತ್ನ ಸಿನಿಮಾದಲ್ಲಿ ಅವರ ಮನೋಗ್ನ ಅಭಿನಯ ಹಿರಿಯರು, ಮಹಿಳೆಯರು, ಮಕ್ಕಳು ಎನ್ನದೇ ಎಲ್ಲ ವರ್ಗದವರನ್ನು ಸೆಳೆಯುವ ಯುವ ರಾಜಕುಮಾರನಂತಾದರು. ಚಿತ್ರರಂಗರದಲ್ಲಿ ರಾಜರತ್ನ ರಂತೆ ಮಿಂಚಿ ಮರೆಯಾದ ಅಪ್ಪು ಅಮರರರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ರಾಜರತ್ನ ಅಪ್ಪು ಯುವ ಸೇನಾ ಸಮಿತಿಯ ಮಂಜುಮಿಲನ, ವಿಷ್ಣು ಮಣಿ, ಕಾರ್ತಿಕ್ ಪವರ್, ಅದರ್ಶ, ಪ್ರದೀಪ್, ಮಹೇಶ್, ಮೋಹನ್, ಪ್ರಕೃತಿ, ಸುನೈನಾ, ಚೇತನ್ ಇತರರು ಇದ್ದರು.