ಚಾಮರಾಜನಗರ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಗೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ ಸಿ-1 ವಿಶೇಷ ಪೋಕ್ಸೋ ನ್ಯಾಯಾಲಯವು 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರದ ರಾಮಸಮುದ್ರ ನಿವಾಸಿ ಶಿವಮೂರ್ತಿ @ ಕರಿಯ ಶಿಕ್ಷೆಗೊಳಗಾದ ಅಪರಾಧಿ. ಸಂತ್ರಸ್ಥೆಯು ಮನೆ ಮುಂದೆ ಕುಳಿತಿದ್ದ ವೇಳೆ ಈತ ಆಕೆಯನ್ನು ಮನೆಯೊಳಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದನು. ಸಾಕ್ಷ್ಯಾಧಾರಗಳಿಂದ ಕೃತ್ಯ ಸಾಬೀತಾದ ಹಿನ್ನೆಲೆ ಅಪರಾಧಿಗೆ ನ್ಯಾ. ಎಸ್.ಜೆ.ಕೃಷ್ಣ ಅವರು 5 ವರ್ಷ ಕಠಿಣ ಶಿಕ್ಷೆ, 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನಿಗದಿ ಪಡಿಸಿ ನೀಡಲು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ, ಅಪರಾಧಿಯ ವಿರುದ್ಧವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.