ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರ: ಶ್ರೀನಿವಾಸಗೌಡ

ಚಾಮರಾಜನಗರ: ಬಾಲಗಂಗಾಧರನಾಥ ಸ್ವಾಮೀಜಿಯು ದೇಶದ ಶೈಕ್ಷಣಿಕ, ಆರೋಗ್ಯ, ಪರಿಸರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಕರ್ನಾಟಕ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಕರ್ನಾಟಕ ಸೇನಾಪಡೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಡೆದ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ‍ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
  ಸ್ವಾಮೀಜಿಗಳು ದೇಶದಲ್ಲಿ 5 ಕೋಟಿ ಗಿಡಗಳನ್ನು  ನೆಡುವ ಗುರಿ ಹೊಂದಿ. ಮೂರೂವರೆ ದಶಕಗಳ ಕಾಲ ಮಠವನ್ನು ಮುನ್ನಡೆಸಿ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಂದಿಗೂ ಅನೇಕ ಕುಟುಂಬಗಳಿಗೆ ಜೀವನ ಆಧಾರವಾಗಿ ನಿಂತಿದ್ದಾರೆ. ಅವರು ಎಲ್ಲ ಧರ್ಮ, ಸಮುದಾಯಗಳೊಂದಿಗೆ ವಿಶ್ವಾಸ ಹೊಂದಿದ್ದರು. ಅವರು ನಮ್ಮ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ   ಇಂಥ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಪೂರ್ವದ ಸಂಸ್ಕೃತಿ, ಭವಿಷ್ಯದ ಪ್ರಗತಿಯನ್ನು ಗುರುಸ್ಥಾನದಿಂದ ಕಾಣಬೇಕು. ಯಾವುದೇ ವ್ಯಕ್ತಿ ಉನ್ನತ ಸ್ಥಾನ ಪಡೆಯಬೇಕಾದರೆ ತಾಯಿ, ಗುರುವಿನ ಪಾತ್ರ ಬಹಳ ಮುಖ್ಯ ತಾಯಿ ಮತ್ತು ಗುರುವಿನ ಆಶೀರ್ವಾದದ ಫಲವೇ ನಾವೆಲ್ಲರೂ ಸಮೃದ್ಧಿಯಾಗಿ ನಾಗರೀಕ ಜೀವನ ನಡೆಸುತ್ತಿದ್ದೇವೆ. ಬಾಲಗಂಗಧರನಾಥಸ್ವಾಮೀಜಿ ಅವರು ಅನ್ನದಾಸೋಹ, ಶಿಕ್ಷಣ, ಆರೋಗ್ಯ ಸೇವೆ ಮೂಲಕ ಧರ್ಮ ಉಳಿಸುವ ಪಕ್ರಿಯೆಯನ್ನು ಮಾಡಿದ್ದಾರೆ ಎಂದರು.
ಉದ್ಯಮಿ ಶ್ರೀನಿಧಿಕುದರ್ ಮಾತನಾಡಿ, ಆದಿಚುಂಜನಗಿರಿ ಮಠದ ಬಾಲಗಂಗಾಧರನಾಥಸ್ವಾಮೀಜಿ ಅವರು ಅತಿ ಚಿಕ್ಕವಯಸ್ಸಿನಲ್ಲಿ ಮಠದ ಪೀಠಾಧ್ಯಕ್ಷರಾಗಿದ್ದು, ಗ್ರಾಮಗಳ ಸಂಚಾರ ಮಾಡಿ ಜನರಿಂದ ಆಹಾರಧಾನ್ಯ ಸಂಗ್ರಹಿಸಿ ಮಠ ದಾಸೋಹ ವ್ಯವಸ್ಥೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು, ಅನ್ನದಾಸೋಹ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವಕೊಡುವ ಮೂಲಕ ಮಠವನ್ನು ಹೆಮ್ಮರವಾಗಿ ಬೆಳೆಸಿದರು ಎಂದರು.
ಕಾರ್ಯಕ್ರಮದಲ್ಲಿ ಶಾ.ಮುರಳಿ, ನಗರಸಭಾ ಮಾಜಿ ಸದಸ್ಯ ಗಣೇಶ ದೀಕ್ಷಿತ್, ರಾ.ಜಗದೀಶ್, ಮಹೇಶ್ ಗೌಡ,   ಶ್ರೀನಿಧಿಕುದರ್, ಗೌಸ್ ಷರೀಫ್, ಪಣ್ಯದಹುಂಡಿ ರಾಜು, ಪದ್ಮಪುರುಷೋತ್ತಮ್, ರಂಗಸ್ವಾಮಿ, ಹೊಮ್ಮ ಲೋಕೇಶ್, ನಾಗರಾಜು, ಮಹೇಶ್,  ಶಿವಣ್ಣ, ಮುತ್ತುರಾಜು, ರವಿಚಂದ್ರಪ್ರಸಾದ್, ತಾಂಡವಮೂರ್ತಿ, ನಾಗರಾಜು, ನಾಗೇಂದ್ರ, ಗೀತಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *