ನಿನಾದ್ ಮ್ಯೂಸಿಕಲ್ ಟ್ರಸ್ಟ್ ವತಿಯಿಂದ ಬಾಲು ನಮನ ಲೈವ್ ಮ್ಯೂಸಿಕ್

ಮೈಸೂರು: ನಿನಾದ್ ಮ್ಯೂಸಿಕಲ್ ಟ್ರಸ್ಟ್ ಹಾಗೂ ಪ್ರಸನ್ನ ಫಿಲ್ಮ್ ಹಿಟ್ಸ್ ವತಿಯಿಂದ ಎ.ಎಸ್.ಪ್ರಸನ್ನಕುಮಾರ್ ಅವರ ಅಂಗೀತ ನಿರ್ದೇಶನದಲ್ಲಿ ಬಾಲು ನಮನ ಲೈವ್ ಮ್ಯೂಸಿಕ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಸಂಜೆ ೫ ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತಗಾರರು, ಗಾಯಕ ಗಾಯಕಿಯರು ಆಗಮಿಸಲಿದ್ದು, ಈ ಕಾರ್ಯಕ್ರಮದಲ್ಲಿ ಚಂದನ ವಾಹಿನಿಯ ತಾಳವಾದ್ಯ ಗಾಯಕರಾದ ಸುದರ್ಶನ್, ಸರಿಗಮಪ ರಿಯಾಲಿಟಿ ಶೋ ಫೈನಲಿಸ್ಟಿ ಅಮೂಲ್ಯ ಅವರನ್ನು ಸನ್ಮಾನಿಸಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ೯೮೪೫೮೬೦೫೨೮, ೮೨೭೭೭೩೪೮೪೧ ನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *