ಚಾಮರಾಜನಗರ: ಬಿಜೆಪಿ ರಾಮಮಂದಿರದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಸಚಿವ ಬಿ.ಸೋಮಶೇಖರ್ ಆರೋಪಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿರುವ ಕಾಂಗ್ರೆಸ್ ಪಕ್ಷದ ಹಳೆಯ ಕಚೇರಿಗೆ ಗುರುವಾರ ಅವರು ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಂಗ್ರೆಸ್ ಅಭಿವೃದ್ದಿ ಹೆಸರಿನಲ್ಲಿ ರಾಜಕಾರಣ ಮಾಡಿದರೆ ಬಿಜೆಪಿ ರಾಮಮಂದಿರ ನಿರ್ಮಾಣ, ಹಿಂದೂ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಕೋಮುಗಲಭೆ ಸೃಷ್ಠಿಸಿ, ಧರ್ಮಧರ್ಮಗಳ ನಡುವೆ ಕಂದಕಗಳನ್ನು ಸೃಷ್ಠಿಸಿ ರಾಜಕಾರಣ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಯಶ್ವಸಿಯಾಗಿ ಜಾರಿಗೊಳಿಸಿ ನುಡಿದಂತೆ ನಡೆಯುವ ಮೂಲಕ ಜನರಿಗೆ ಉತ್ತಮ ಕೆಲಸ ಮಾಡುತ್ತಿದೆ ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ದಿ ಕೆಲಸವನ್ನು ಯಾವುದೇ ಮಾಡದೇ ಚುನಾವಣಾ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣವನ್ನು ಜನರಿಗೆ ಬಿತ್ತರಿಸುತ್ತಿದೆ. ಧಾರ್ಮಿಕ ಆಚರಣೆಯಲ್ಲಿ ಧರ್ಮ ಆಧಾರದಲ್ಲಿ ರಾಜಕೀಯ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಸದ ಅನಂತಕುಮಾರ್ ಹೆಗಡೆ ಅವರು ಮುಖ್ಯಮಂತ್ರಿಗಳನ್ನು ಅವಹೇಳಕಾರಿ ಮಾತನಾಡಿರುವುದು ಬಹಳ ನೋವು ಉಂಟು ಮಾಡಿದೆ. ಇದು ಖಂಡನೀಯ. ಅವರ ವಿರುದ್ದ ಬಜೆಪಿಯವರು ಕ್ರಮ ತೆಗೆದುಕೊಳ್ಳಬೇಕಾಗಿತ್ತು ಆದರೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದರು.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಕೂಡು ಕಂದಾಯ ಇಲಾಖೆ ಸಚಿವರಾಗಿದ್ದು, ಹೊಸ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಮಾಡಿದೆ. ದಿವಂಗತ ಮಾಜಿ ಸಂಸದರಾದ ಆರ್.ಧ್ರುವನಾರಾಯಣ್ ಅವರು ೨ ಅವಧಿಯಲ್ಲಿ ತುಂಬಾನೆ ಕೆಲಸ ಮಾಡಿದ್ದಾರೆ. ಆದರ ನಂತರ ಜಿಲ್ಲೆ ಅಭಿವೃದ್ದಿ ಕಾಣದೇ ಹಿಂದುಳಿದಿದೆ ೧೦ ಹಿಂದುಳಿದಿರುವ ಜಿಲ್ಲೆಯಲ್ಲಿ ಚಾಮರಾಜನಗರ ಜಿಲ್ಲೆಯೂ ಕೂಡ ಒಂದಾಗಿದೆ ಆಗಾಗಿ ನಮ್ಮ ಅವಧಿಯಲ್ಲಿ ರಚನೆ ಮಾಡಿದ ಜಿಲ್ಲೆಯನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಚಾಮರಾಜನಗರ ಲೋಕಸಭಾ ಚುನಾವಣೆಗೆ ನಾನೂ ಕೂಡ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ನನಗೂ ರಾಜಕಾರಣ, ಅಭಿವೃದ್ದಿಯಲ್ಲಿ ಸಾಕಷ್ಠು ಅನುಭವವಿದ್ದು, ನಾನು ಸಂಸದನಾದರೆ ಜಿಲ್ಲೆಯನ್ನು ಅಭಿವೃಧ್ದಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತೆಗೆದುಕೊಂಡು ಹೋಗುವೆ ಎಂದರು.
ಕೇಂದ್ರದಲ್ಲಿ ದೊಡ್ಡದೊಡ್ಡ ಯೋಜನೆಗಳನ್ನು ತಂದು ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲು ಆದ್ಯತೆ ಕೊಡುತ್ತೇನೆ. ಅನೇಕ ಯುವಕರು ಉದ್ಯೋಗ ಇಲ್ಲದೆ ತೊಂದರೆಯಲ್ಲಿದ್ದಾರೆ. ದೊಡ್ಡದೊಡ್ಡ ಕಂಪನಿ, ಕಾರ್ಖಾನೆ ತಂದು ಉದ್ಯೋಗ ಕಲ್ಪಿಸಿಕೊಡಲಾಗುತ್ತದೆ ಆಗಾಗಿ ಪಕ್ಷದ ವರಿಷ್ಠರು, ಜಿಲ್ಲೆಯ ಜನತೆ ನನಗೊಂದು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ನಾನು ನಾಲ್ಕು ಸಚಿವನಾಗಿದ್ದು, ನನ್ನ ಅವಧಿಯಲ್ಲಿ ಮಾಡಿರುವ ಕಾರ್ಯಕ್ರಮಗಳು ಇಡೀ ದೇಶದಲ್ಲೇ ಅನುಕರಣೇ ಮಾಡುವಂತ ಕಾರ್ಯಕ್ರಮಗಳು ಆಗಿವೆ. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಸೆಷ್ಟೇಬರ್, ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿದ್ದರು. ಇದರಿಂದ ತುಂಭಾ ವಿದ್ಯಾರ್ಧಿಗಳು ಅಲ್ಲಿಗೆ ಶಿಕ್ಷಣ ಮೊಟಕುಗೊಳಿಸುತ್ತಿದ್ದರು ಅದನ್ನು ಮನಗಂಡು ನಾನು ೧೯೮೮ರಲ್ಲಿ ಮೇ, ಜೂನ್ ತಿಂಗಳಲ್ಲೇ ಪರೀಕ್ಷೆ ಮಾಡಿ ಫಲಿತಾಂಶ ಬಂದು ಮಾರ್ಚ್ ತಿಂಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೊಂದಿಗೆ ಓದುವ ಅವಕಾಶ ಮಾಡಿಕೊಟ್ಟಿದೆ ಈ ಕಾರ್ಯಕ್ರಮ ದೇಶದಲ್ಲೇ ಮಾದರಿ ಆಯಿತು. ಕಾಂಗ್ರೆಸ್ ಪಕ್ಷ ನನಗೆ ಅವಕಾಶ ಮಾಡಿಕೊಟ್ಟರೆ ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ದಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತೆಗೆದುಕೊಂಡು ಹೋಗುವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಛೇರ್ಮನ್ ಕಾಡಹಳ್ಳಿ ಮಹದೇವಪ್ಪ, ಅಮಚವಾಡಿ ಕಾಂತರಾಜು, ಪಾಪಣ್ಣ, ಚೆನ್ನಬಸವಣ್ಣ, ಜಯಕುಮಾರ್, ಶಿವಕುಮಾರ್ ಇತರರು ಹಾಜರಿದ್ದರು.