ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಗುಣಪಡಿಸಬಹುದು: ಡಾ.ಶ್ವೇತಾ ಶಶಿಧರ್

ಉಚಿತ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಶಿಬಿರ


ಚಾಮರಾಜನಗರ: ಕ್ಯಾನ್ಸರ್ ಎಂಬ ಮಾರಿಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ಒಂದು ಗುಣಪಡಿಸಬಹುದು ಎಂದು ಮರಿಯಾಲ ಬಸವರಾಜೇಂದ್ರ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞರಾದ ಡಾ.ಶ್ವೇತಾ ಶಶಿಧರ್ ತಿಳಿಸಿದರು.
ತಾಲೂಕಿನ ಮರಿಯಾಲದ ಬಸವ ರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ,  ಬಸವ ರಾಜೇಂದ್ರ ಆಸ್ಪತ್ರೆ, ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್
ಸಹಯೋಗದಲ್ಲಿ ನಡೆದ ಉಚಿತ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ನಲ್ಲಿ ಸರ್ವೆಕಲ್, ಸ್ತನ‌ ಕ್ಯಾನ್ಸರ್ ಎಂಬ ಎರಡು ವಿಧವಿದ್ದು, ಇದರ ಲಕ್ಷಣಗಳು ಕಂಡುಬಂದಾಗ ಸ್ಕೀನಿಂಗ್ ಮಾಡಿಸಿಕೊಳ್ಳಬೇಕು. ಇದು‌ ಒತ್ತಡದಿಂದ ಬರುವುದಿಲ್ಲ, ಬದಲಿಗೆ ಅಪೌಷ್ಠಿಕತೆ ಕೊರತೆಯಾದಾಗ ಉಂಟಾಗುತ್ತದೆ. ಅಸಾಮಾನ್ಯ ಯೋನಿಯಿಂದ ರಕ್ತಸ್ರಾವ, ಕೆಳ ಹೊಟ್ಟೆ ಅಥವಾ ಪ್ರೋಣಿ ಭಾಗದಲ್ಲಿ ನಿರಂತರ ನೋವು, ಅಸಹಜ ಯೋನಿ ಸ್ರಾವ, ಲೈಂಗಿಕ ಸಂಪರ್ಕದ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಇದರ‌ ಸಾಮಾನ್ಯ‌ ಲಕ್ಷಣಗಳಾಗಿವೆ. ಯಾವ ಮಹಿಳೆಯೂ ಕೂಡ ಹಿಂಜರಿಕೆಯಿಂದ ಸಂಕೋಚದಿಂದ ಮುಚ್ಚಿಟ್ಟುಕೊಂಡು ರೋಗ ಉಲ್ಭಣಕ್ಕೆ ಕಾರಣವಾಗಿ ಜೀವ ತೆರಬಾರದು. ಬದಲಿಗೆ ಇಂತಹ ಲಕ್ಷಣಗಳು ಕಂಡು ಬಂದ ಪ್ರಾರಂಭದಲ್ಲೇ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಪರಿಹಾರ ಕಮಡುಕೊಳ್ಳಬೇಕು ಎಂದರು.
ಗರ್ಭಕಂಠ ಕ್ಯಾನ್ಸ‌ರ್ ನ ಚಿಕಿತ್ಸೆಗೆ ವಿಶೇಷ ರಿಯಾಯಿತಿ ದರದಲ್ಲಿ ಎಚ್ ಪಿವಿ  ಲಸಿಕೆ ಲಭ್ಯವಿದೆ. ನಿಮ್ಮ ಆರೋಗ್ಯ ಮುಖ್ಯವಾಗಿದ್ದು, ಆರೋಗ್ಯಕರ ನಾಳೆಗಾಗಿ‌  ಒಂದು ಸಣ್ಣ ಹೆಜ್ಜೆ ಇಡಬೇಕು ಎಂದು‌‌ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವ ರಾಜೇಂದ್ರ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರು, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಎಂ ಬಸವ ರಾಜೇಂದ್ರ ಮಾತನಾಡಿ ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆಯಂತೆ ಕುಟುಂಬದ ನಿರ್ವಣೆಯಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ಆದ್ದರಿಂದ ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಕ್ಯಾನ್ಸರ್ ಲಕ್ಷಣ ಕಂಡುಬಂದಾಗ ಮೊದಲನೇ ಹಂತದಲ್ಲಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ವಯಸ್ಸಿನ ಅಂತರವಿಲ್ಲ. ಮಹಿಳೆಯರು ಕ್ಯಾನ್ಸರ್ ತಪಾಸಣಾ ಶಿಬಿರದ‌ ಸದ್ಬಳಕೆ ಮಾಡಿಕೊಳ್ಳಬೇಕು. ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ರಾಜೇಂದ್ರ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಶಶಿಧರ್ ಕುಮಾರ್,  ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದ ಡಾ.ಶ್ವೇತಾಂಬರಿ, ಶ್ರೀ ಕ್ಷೇತ್ರ ಧರ್ಮಸ್ಥಳ‌ ಗ್ರಾಮಾಭಿವೃದ್ಧಿ ಯೋಜನಾ ಬಿಸಿ ಟ್ರಸ್ಟ್ ಸಂಸ್ಥೆಯ ತಾಲೂಕು ಯೋಜನಾಧಿಕಾರಿ
ಹರೀಶ್ ಕುಮಾರ್ ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತಾ, ನಾರಾಯಣ
ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *