ಕೇಂದ್ರ ರೈಲ್ವೆ ರಾಜ್ಯ ಉಸ್ತುವಾರಿ ಸಚಿವ ವಿ.ಸೋಮಣ್ಣರಿಂದ ಕ್ಯಾಲೆಂಡರ್ ಬಿಡುಗಡೆ

ಚಾಮರಾಜನಗರ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯು ಹೊರತಂದಿರುವ 2026 ನೇ ಸಾಲಿನ ಕ್ಯಾಲೆಂಡರ್ ನ್ನು ಕೇಂದ್ರ ರೈಲ್ವೆ ರಾಜ್ಯ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆ ಮಾಡಿ ಶುಭ ಕೋರಿದರು.
ತಾಲೂಕಿನ ಸಂತೇಮರಹಳ್ಳಿಯ ಎಂ.ಪಿ. ಬಸವಣ್ಣ ನಿವಾಸದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಮುಖಂಡ ಎಂ.ಪಿ.ಬಸವಣ್ಣ,  ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಪ್ಪ, ನಿವೃತ್ತ ಪೋಲಿಸ್ ಅಧಿಕಾರಿ ಬಿ.ಪುಟ್ಟಸ್ವಾಮಿ, ಭೋಗಾಪುರ ರಾಜ್ ಗೋಪಾಲ್, ಉದ್ಯಮಿ ಶ್ರೀನಿಧಿಕುದರ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಹೆಚ್.ಎಂ.ಶಿವಣ್ಣ ಹೊಸೂರು, ಸಂಘಟನಾ ಕಾರ್ಯದರ್ಶಿ ಬಂಗಾರು, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *