ಚಾಮರಾಜನಗರ ರೋಟರಿ ಕ್ಲಬ್ ಅತ್ಯುತ್ತಮ :ಪಿ.ಕೆ.ರಾಮಕೃಷ್ಣ

  • ರೋಟರಿ ಜಿಲ್ಲಾ ಗೌರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ
  • ಸಾಧಕರಿಗೆ ಸನ್ಮಾನ, ಹೊಲಿಗೆಯಂತ್ರ ವಿತರಣೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

 ಚಾಮರಾಜನಗರ. ಚಾಮರಾಜನಗರ ರೋಟರಿ ಕ್ಲಬ್ ಉತ್ತಮ ಸೇವಾ ಕಾರ್ಯಕ್ರಮಗಳ ಮಾಡುವ ಮೂಲಕ ಒಂದು ಅತ್ಯುತ್ತಮ ಕ್ಲಬ್ ಆಗಿದೆ ಎಂದು ಜಿಲ್ಲಾ ಗೌರ್ನರ್ ಪಿ.ಕೆ.ರಾಮಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ರೋಟರಿ ಭವನದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ -9ರ ಜಿಲ್ಲಾ ಗೌರರ್‌ರವರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಒಂದು ಸೇವಾ ಸಂಸ್ಥೆಯಾಗಿದ್ದು, ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರಗಳಲ್ಲಿ ಸೇವೆ ಮಾಡುವ ಜೊತೆಗೆ ಸಾರ್ವಜನಿಕರ ಅನುಕೂಲಕರ ಕೆಲಸ ಮಾಡುತ್ತಿದೆ. ಅದೇ ರೀತಿಯಲ್ಲಿ ಚಾಮರಾಜನಗರ ಕ್ಲಬ್ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು… ನಗರದ ನೋಂದಣಿ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಲು ಬೆಂಜ್ ಮಾಡಿರುವುದು ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.

ರೋಟರಿ ಸಂಸ್ಥೆಯಿಂದ ನಾಯಕತ್ವ ಗುಣ, ಸೇವೆ ಮಾಡುವ ಮನೋಭಾವನೆ ಬೆಳೆಯುತ್ತದೆ. ಎಂದು ರೋಟರಿ ಸಂಸ್ಥೆ, ಫೌಂಡೇಶನ್ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ ಚಾಮರಾಜನಗರ ಕ್ಲಬ್ ಸೇವಾ ಕಾರ್ಯಗಳು ಅತ್ಯುತ್ತಮವಾಗಿದ್ದು ರೋಟರಿ ಜಿಲ್ಲೆಯ ಇತರ ಕ್ಲಬ್‌ಗಳಿಗೆ ಮಾದರಿಯಾಗಿದೆ ಎಂದರು.

ಸಹಾಯಕ ಜಿಲ್ಲಾ ಗೌರರ್ ದೊಡ್ಡ ರಾಯಪೇಟೆ ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ… ರೋಟರಿ ಸಂಸ್ಥೆಯು 56 ವರ್ಷಗಳಿಂದ ನಿರಂತರ ಸೇವೆ ಮಾಡುತ್ತಿದೆ. ಪ್ರತಿತಿಂಗಳು ಉಚಿತ ಕಣ್ಣಿನ ತಪಾಸಣೆ ಶಿಬಿರ ಅಯೋಜನೆ, 499 ರೂ ನಲ್ಲಿ ಡಯಾಲಿಸಿಸ್ ಸೇವೆ ಮಾಡುತ್ತದೆ. ನಿಜವಾಗಲು ರೋಟರಿ ಸೇವೆ ಕಾರ್ಯಗಳನ್ನು ಹೆಮ್ಮೆ ಪಟ್ಟು ಅಭಿನಂದಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯ ಪದಾಧಿಕಾರಿಗಳೆಲ್ಲರ ಮಾರ್ಗದರ್ಶನ, ಸಹಕಾರದಲ್ಲಿ ಜು.1 ರಿಂದ ಇಲ್ಲಿಯ ತನಕ 118 ಸೇವಾ ಕಾರ್ಯಗಳನ್ನು ಮಾಡಲಾಗಿದೆ. ಅದರಲ್ಲಿ ಪ್ರಮುಖವಾದ ಬಡಜನರಿಗೆ ಚಿಕಿತ್ಸೆ ನೀಡುತ್ತಿರುವ ಡಯಾಲಿಸಿಸ್ ಕಾರ್ಯಕ್ರಮ ರೋಟರಿ ಇತಿಹಾಸದಲ್ಲೇ ರೋಟರಿಯನ್,  ಸಾರ್ವಜನಿಕರ ಸಹಕಾರದೊಂದಿಗೆ ನಡೆಸಿಕೊಂಡು ಬರಲಾಗಿದೆ ಈ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಐವರಿಸಿ ಬಂಧುಗಳಿಗೂ, ವೈದ್ಯರಿಗೆ ನಾನು ಅಬಾರಿಯಾಗಿರುತ್ತೇನೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಶ್ರೇಷ್ಠ,  ವಕೀಲರಾದ ಮೋಹನ್, ಪೊಲೀಸ್ ನವೀನ್, ಮೊಹಮ್ಮದ್ ಅರ್ಮಾನ್,  ಎನ್.ಮನೋಜ್ಸ ನ್ಮಾನಿಸಲಾಯಿತು, ಹೊಲಿಗೆಯಂತ್ರ ವಿತರಿಸಲಾಯಿತು. ಬಡರೋಗಿಯೊಬ್ಬರ ಡಯಾಲಿಸಿಸ್‌ ಗೆ ಅಬ್ದುಲ್‌ ಅಜೀಜ್ ದೀನಾ 10 ಸಾವಿರ ಧನ ಸಹಾಯ ಚೆಕ್ ವಿತರಿಸಿದರು. ವಿದ್ಯಾರ್ಥಿನಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *