- ಜನವಿರೋಧಿ ಕೇಂದ್ರ ಬಜೆಟ್ ಗೆ ಧಿಕ್ಕಾರ ಎಂದು ಬರೆದಿದ್ದ ಭಿತ್ತಿಪತ್ರಕ್ಕೆ ಬೆಂಕಿಹಚ್ಚಿ ಅಕ್ರೋಶ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಎ.ನಾಗಮಣಿ, ಮುಖಂಡ ರಾಮಕೃಷ್ಣ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಅಗ್ರಹಾರ ಬೀದಿಯ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ,ಜನವಿರೋಧಿ ಕೇಂದ್ರ ಬಜೆಟ್ ಗೆ ಧಿಕ್ಕಾರ ಎಂದು ಬರೆದಿದ್ದ ಭಿತ್ತಿಪತ್ರಕ್ಕೆ ಬೆಂಕಿಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಶಿಕ್ಷಣ ಇಲಾಖೆ ಎಲ್ ಕೆಜಿ, ಯುಕೆಜಿ ನಡೆಸುವುದನ್ನು ನಿಲ್ಲಿಸಿ, ಅಂಗನವಾಡಿ ಕೇಂದ್ರಗಳಲ್ಲಿಯೇ ನಡೆಸಬೇಕು. ಮತ್ತು ಅಗತ್ಯವಿರುವ ಬಜೆಟ್ ಕೊಡಬೇಕು.

ಅಂಗನವಾಡಿ ನೌಕರರಿಗೆ ದ್ರೋಹ ಬಗೆದ 4 ಕಾರ್ಮಿಕ ಸಂಹಿತೆಗಳು ರದ್ದುಪಡಿಸಬೇಕು ಶಾಸನ ಬದ್ದ ಸವಲತ್ತುಗಳನ್ನು ನೀಡದ “ಶ್ರಮಶಕ್ತಿ ನೀತಿ” 2025 ಬೇಡವೇ ಬೇಡ,. ಅಂಗನವಾಡಿ ನೌಕರರಿಗೂ ಮುಟ್ಟಿನ ರಜೆ ನೀಡಬೇಕು.456 ಲಕ್ಷ ಸ್ಕಿಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶಾನಾಲಯವನ್ನು ರಚಿಸಬೇಕು.
2018 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ, ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ-ಪದಾರ್ಥಗಳನ್ನು ನೀಡಬೇಕು.
2018 ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ, ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700 ರೂ., ಸಹಾಯಕಿಗೆ 1350 ರೂಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು FRS ನ್ನು ರದ್ದು ಮಾಡಬೇಕು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು.
. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತರ ಮೇಲೆ ಶಿಸ್ತುಕ್ರಮ ಜರುಗಿಸಬಾರದು.
ಖಾಸಗಿ ಅಂಗನವಾಡಿ ವಿಚಾರಗಳಲ್ಲಿ ನೌಕರರ ಬಂದನವಾದಗ ವಿಚಾರಣೆ ನಡೆಸದೆ ಏಕಮುಖವಾಗಿ ಕೆಲಸದಿಂದ ವಜಾ ಮಾಡುವುದನ್ನು ನಿಲ್ಲಿಸಬೇಕು.
ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು.
ಅಂಗನವಾಡಿ ನೌಕರರನ್ನು ಖಾಯಂ ಮಾಡುವ ತನಕ 26 ಸಾವಿರ ಕನಿಷ್ಠ ವೇತನ ಹೆಚ್ಚಿಸಬೇಕು.
ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷೆ ಗುರುಮಲ್ಲಮ್ಮ, ಕಾರ್ಯದರ್ಶಿ ದೇವಮಣಿ, ಚಾಮರಾಜನಗರ ತಾಲೂಕು ಕಾರ್ಯದರ್ಶಿಶಾಹಿದಾಬಾನು, ಖಜಾಂಚಿ ಗುರುಲಿಂಗಮ್ಮ, ಸಂತೇಮರಹಳ್ಳಿ ಅಧ್ಯಕ್ಷ ಪಾರ್ವತಮ್ಮ, ಕಾರ್ಯದರ್ಶಿ
ತೊಳಸಮ್ಮ ಕೊಳ್ಳೇಗಾಲ ತಾಲೂಕು ಅಧ್ಯಕ್ಷೆ
ಶಾಂತಮ್ಮ ಯಳಂದೂರು ತಾಲೂಕು ಅಧ್ಯಕ್ಷೆ ಮೀನಾಕ್ಷೆ, ಬಿಸಿಯೂಟ ಜಿಲ್ಲಾಧ್ಯಕ್ಷೆ, ಶಿವಮ್ಮ ಇತರರು ಭಾಗವಹಿಸಿದ್ದರು.