ಸಮುದಾಯ ಭವನಗಳು ಸಮಾಜದ ಅಭಿವೃದ್ದಿ ಹಾಗೂ ಜ್ಞಾನದ ಸಂಕೇತವಾಗಲಿ : ಪುಟ್ಟರಂಗಶೆಟ್ಟಿ

ಚಾಮರಾಜನಗರ: ಸಮುದಾಯ ಭವನಗಳು ಆಯಾ ಗ್ರಾಮಗಳ ಅಭಿವೃದ್ದಿ ಮತ್ತು ಜ್ಞಾನದ ಸಂಕೇತವಾಗಿ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುವ ಕೇಂದ್ರಗಳಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲೂಕಿನ ಚಂದಕವಾಡಿಯಲ್ಲಿ ಗಾಣಿಗರ ಸಮುದಾಯದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಂದಕವಾಡಿ ಹೋಬಳಿ ಕೇಂದ್ರವಾಗಿದ್ದು, ಎಲ್ಲಾ ಸಮುದಾಯವರು ಒಗ್ಗಟ್ಟಿನಿಂದ ಸಹೋದರಂತೆ ಬಾಳ್ವೆ ಮಾಡುತ್ತಿದ್ದಾರೆ. ಗಾಣಿಗ ಸಮುದಾಯದವರಿಗೆ ಭವನ ನಿರ್ಮಾಣ ಮಾಡಿಕೊಳ್ಳಲು ನನ್ನ ಅನುದಾನದ ಜೊತೆಗೆ ದಿ. ಆರ್. ಧ್ರುವನಾರಾಯಣ್, ಮಾಜಿ ಸಭಾಪತಿಗಳಾಗಿದ್ದ ವಿ.ಆರ್. ಸುದರ್ಶನ್ ಸೇರಿದಂತೆ ಅನೇಕರು ಅನುದಾನದಡಿಯಲ್ಲಿ ಬಹಳ ಸುಸಜ್ಜಿತವಾಗಿ ಗಾಣಿಗ ಸಮುದಾಯದ ಬಂಧುಗಳ ಭವನ ನಿರ್ಮಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮುದಾಯದ ಭವನ ಸದಾ ಚಟುವಟಿಕೆಯಿಂದ ಕೂಡಿರುವ ಜೊತೆಗೆ ಜ್ಞಾನದ ಸಂಕೇತವಾಗಬೇಕು. ಈ ವ್ಯಾಪ್ತಿಯ ಮಕ್ಕಳಿಗೆ ಪಾಠ ಪ್ರವಚನ, ಶುಭ ಸಮಾರಂಭಗಳಿಗೆ ಬಳಕೆ, ಕೌಶಲ್ಯ ತರಭೇತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಭೆಗಳನ್ನು ನಡೆಸುವ ಮೂಲಕ ಭವನವು ಗ್ರಾಮಸ್ಥರ ಹಾಗೂ ಸಮುದಾಯದ ಅಸ್ತಿಯನ್ನಾಗಿಸುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಹೊಂದಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಗಾಣಿಗರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ಗಾಣಿಗ ಸಮುದಾಯದವರು ಸಂಘಟಿತರಾಗಿ ಜಾಗೃತಿರಾಗುವ ಮೂಲಕ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ವೃತ್ತಿ ಕಾರಣದಿಂದ ಅಲ್ಲಲ್ಲಿ ಚದುರು ಹೋಗಿರುವ ಗಾಣಿಗ ಸಮುದಾಯ ಜಾಗತೀಕರಣದಿಂದಾಗಿ ಅತಂತ್ರವಾಗಿದೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ವೃತ್ತಿಪರರಿಗೆ ಆರ್ಥಿಕ ಭದ್ರತೆ ಮತ್ತು ಕೌಶಲ್ಯ ತರಬೇತಿಗಳನ್ನು ನೀಡಿ, ಅವರನ್ನು ಇತರೇ ಸಮಾಜದೊಟ್ಟಿಗೆ ಕರೆದುಕೊಂಡುವ ಹೋಗುವ ಜವಾಬ್ದಾರಿ ಜನಪ್ರತಿನಿಧಿಗಳಲ್ಲಿದೆ.

ಹೀಗಾಗಿ ಸಮುದಾಯದವರು ಶಿಕ್ಷಣ ಪಡೆಯುವ ಜೊತೆಗೆ ಸಾಮಾಜಿಕ ಹಾಗು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರು.
ಸಭೆಯಲ್ಲಿ ಜನಾಂಗದ ಮುಖಂಡರಾಗಿದ್ದ ದಿ.ಕೃಷ್ಣ ಅವರು ಸ್ಮರಣೆ ಮಾಡುವ ಜೊತೆಗೆ ಅವರು ಭವನ ನಿರ್ಮಿಸಲು ಪ್ರಮುಖ ಕಾರಣಕರ್ತರೆಂದು ಶಾಸಕರು ಸೇರಿದಂತೆ ಗಣ್ಯರು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮುರ್ತಿ, ಚಂದಕವಾಡಿ ಗ್ರಾ.ಪಂ. ಅಧ್ಯಕ್ಷ ನಟರಾಜು, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಅಂಕಪ್ಪ, ಚಾ.ನಗರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಜಗದೀಶ್, ಚಂದಕವಾಡಿ ಎಳುನೀರು ವ್ಯಾಪಾರಿ ರಾಜಣ್ಣ, ಮಹದೇವಶೆಟ್ಟಿ ಚಂದ್ರಕಾಂತ್, ಗೌಡಿಕೆ ಶಿವನಾಂಕಾರಪ್ಪ, ಗೌಡಿಕೆ ರಾಜೇಂದ್ರ, ಬಸವರಾಜನಾಯಕ, ವಿಷಕಂಠನಾಯಕ, ರಾಜನ್ಣ, ನಣ್ಣ, ನಾಗÀರಾಜು, ಶ್ರೀಕಂಠ,ರವಿ, ಪ್ರಸಾದ್, ರಂಗಸ್ವಾಮಿ, ಸಿದ್ದಯ್ಯ, ಶಿವಕುಮಾರ್ ಹಾಗೂ ಕುಲಸ್ಥರು ಎಲ್ಲಾ ಸಮುದಾಯದ ಯಜಮಾನರು ಮತ್ತು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *