ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿಕೊಟ್ಟಿರುವ ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಶ್ರೇಷ್ಠ ವಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎನ್. ಜೋಸೆಫ್ ಹೇಳಿದರು.
ತಾಲೂಕಿನ ಮಾದಾಪುರ ಸಂತ ತೆರೇಸಾ ವಿದ್ಯಾಮಂದಿರದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಸಿ ಮಾತನಾಡಿದರು. 1950ರಲ್ಲಿ ದೇಶಕ್ಕೆ .ಸಂವಿಧಾನ ಜಾರಿಗೆ ಬಂದಿತು. ಸಂವಿಧಾನವು ಭಾರತವನ್ನು ಒಂದು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಮೇಲೆ ನಿಂತ ಗಣರಾಜ್ಯೋತ್ಸವವನ್ನಾಗಿ ರೂಪಿಸಿದೆ ಎಂದರು.
ನಮ್ಮ ಹಕ್ಕುಗಳು, ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಗಣರಾಜ್ಯೋತ್ಸವವು ದೇಶದ ಏಕತೆ, ಅಖಂಡಂತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರೂಪಿಸುತ್ತದೆ ಎಂದರು.
ಪ್ರೌಢಶಾಲೆಯಮುಖ್ಯ ಶಿಕ್ಷಕರಾದ ಜಾರ್ಜ್. ಡಿಸೋಜಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುನೀಲ್ ಬಾಸ್ಕೋ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು ಶಾಲೆಯ ಮುಖ್ಯಸ್ಥ ವಂದನೆ ಸ್ವಾಮಿ. ಅಂತೋಣಿ ರಾಜ್ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದೈಹಿಕ ಶಿಕ್ಷಣ ಶಿಕ್ಷಕ ಎನ್.ರಾಜು ವಂದಿಸಿದರು. ಕಮಲ ನಿರೂಪಿಸಿದರು. ವೇದಾವತಿ ವಂದಿಸಿದರು. ಶಿಕ್ಷಕರು, ಶಾಲಾ ಮಕ್ಕಳು, ಪೋಷಕರು ಸಿಬ್ಬಂದಿಗಳು ಹಾಜರಿದ್ದರು.