ಮಕ್ಕಳ ಆರೋಗ್ಯ ಮತ್ತು ಪೌಷ್ಟಿಯುಕ್ತ ಬೆಳವಣಿಗೆಗೆ ಸಹಕಾರಿ : ಪಿ. ಶೇಖರಪ್ಪ

ಚಾಮರಾಜನಗರ: ಸರ್ಕಾರ ಗ್ರಾಮ ಪಂಚಾಯಿತಿಗೊಂದು ಕೂಸಿನ ಮನೆ ನಿರ್ಮಾಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಮಕ್ಕಳ ಆರೋಗ್ಯವನ್ನು ಕಾಪಾಡಲು ಹೆಚ್ಚಿನ ಸಹಕಾರಿಯಾಗಿದೆ ಎಂದು ನಂಜೇದೇವನಪುರ ಗ್ರಾ.ಪಂ. ಅಧ್ಯಕ್ಷ ಪಿ. ಶೇಖರಪ್ಪ ತಿಳಿಸಿದರು.

ತಾಲೂಕಿನ ನಂಜೇದೇವನಪುರ ಗ್ರಾ.ಪಂ. ಕೇಂದ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದ ಕೊಠಡಿಯಲ್ಲಿ ಆರಂಭವಾದ ಕೂಸಿನ ಮನೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ, ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಪೋಷಣೆಗೆ ಹೆಚ್ಚಿನ ಒತ್ತು ನೀಡಿದೆ. ಈಗ ಕೂಸಿನ ಮನೆ ನಿರ್ಮಾಣ ಮಾಡುವ ಮೂಲಕ 8 ತಿಂಗಳ ಮಗುವಿನ ಲಾಲನೆ, ಪೋಷಣೆಯನ್ನು ಮಾಡುವ ಯೋಜನೆ ಇದಾಗಿದೆ.

ಇದರಿಂದ ತಾಯಿಂದಿರಿಗೆ ಹಾಗೂ ಮನೆಗೆಲಸ ಮತ್ತು ಕೂಲಿ ಕಾರ್ಮಿಕರು ಹಾಗೂ ಇತರೇ ಕಡೆ ಕೆಲಸ ಮಾಡುವ ಮಹಿಳೆಯರು ತಮ್ಮ ಮಗುವನ್ನು ಇಲ್ಲಿ ಬಿಟ್ಟು ಹೋದವರು ಇಲ್ಲಿನ ನಾಲ್ವರು ಸಿಬ್ಬಂದಿಗಳು ಹಾರೈಕೆ ಮಾಡುತ್ತಾರೆ. ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೂಸಿನ ಮನೆಯಲ್ಲಿ ಮಾಡಲಾಗಿದೆ. ಅಡಿಕೆ ವಸ್ತುಗಳು, ಮಕ್ಕಳಿಗೆ ಅಗತ್ಯವಾದ ಹಾಲು, ಇತರೇ ಸಾಮಗ್ರಿಗಳನ್ನು ಗ್ರಾ.ಪಂ. ನಿಂದಲೇ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಟೇಲ್‍ಗುರುಮಲ್ಲಪ್ಪ, ಪಿಡಿಓ ವೀಣಾ, ಸದಸ್ಯರಾದ ಬಸವಣ್ಣ, ಮಹದೇವಸ್ವಾಮಿ, ಭಾಗ್ಯಮ್ಮ,ಮಂಜುಳಾ, ಮಹದೇವಶೆಟ್ಟಿ, ಬಸವಶೆಟ್ಟಿ, ಮುಖ್ಯ ಶಿಕ್ಷಕ ನಾಗರಾಜಶೆಟ್ಟಿ, ಬಿಲ್ ಕಲೆಕ್ಟರ್ ಬೆಳ್ಳಯ್ಯ, ಅಂಗನವಾಡಿ ಕಾರ್ಯಕರ್ತೆ ಗುರುಮಲ್ಲಮ್ಮ, ಮಂಜುಳಾ, ಉಡಿಗಾಲ ನಂಜಪ್ಪ, ಹಾರೈಕೆದಾರಾದ ಕವಿತಾ, ದಿವ್ಯ, ಶಿವಮಣಿ, ಶಿಲ್ಪ ಇತರರು ಇದ್ದರು.

Leave a Reply

Your email address will not be published. Required fields are marked *