ಹಿರಿಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ

ಚಾಮರಾಜನಗರ: ನಗರದ ಜೆ. ಹೆಚ್. ಪಟೇಲ್ ಸಭಾಂಗಣ ದಲ್ಲಿ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರಿಗಾಗಿ ಸಂತಸಮಯ ಕಲಾಸಮಯ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಭಾಗವಹಿಸಿ ಕಂಸಾಳೆ, ಜನಪದಗೀತೆ, ಭಾವಗೀತೆ, ಭಕ್ತಿ ಗೀತೆ ಗೊರವರ ಕುಣಿತ ವೀರಮಕ್ಕಳ ಕುಣಿತ ವೀರಗಾಸೆ ಏಕಪಾತ್ರಭಿನಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕೃತ ಹೊನ್ನೂರು ಗೌರಮ್ಮ ನಟಿ ಪಂಕಜ ಜನಪದ ಗಾಯಕ ಸಿಎಂ ನರಸಿಂಹಮೂರ್ತಿ ಸಾಲುಮರದ ವೆಂಕಟೇಶ್ ಹೊಳೆ ಸಾಲಯ್ಯ, ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್ ನ ಪ್ರೊಜೆಕ್ಟ್ ಡೈರೆಕ್ಟರ್ ರೇನಟೋಸ್ ಪಿಂಟು, ಮುತ್ತುರಾಜ್ ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *