- ಚಂದಕವಾಡಿ ಜಿ.ಪಂ. ವ್ಯಾಪ್ತಿಯ ಆರ್. ಬಾಲರಾಜು ಅಭಿಮಾನಿಗಳ ಸಭೆ
- ಏ.12 ರಂದು ಸಿಎಂ, ಡಿಸಿಎಂ, ಸಚಿವರ ಸಮ್ಮುಖದಲ್ಲಿ ಆರ್. ಬಾಲರಾಜು ಕಾಂಗ್ರೆಸ್‍ಗೆ ಸೇರ್ಪಡೆ

ಚಾಮರಾಜನಗರ: ಚಂದಕವಾಡಿ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಹಾಗೂ ಮಾಜಿ ರಾಜ್ಯಪಾಲ ದಿ. ಬಿ.ರಾಚಯ್ಯ ಅವರ ಪುತ್ರ ಆರ್. ಬಾಲರಾಜು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಲು ನಿರ್ಧರಿಸಿದರು.
ನಗರದ ವರ್ತಕರ ಭವನದಲ್ಲಿ ಚಂದಕವಾಡಿ ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ಆರ್. ಬಾಲರಾಜು ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯ ಭವಿಷ್ಯವನ್ನು ಇನ್ನು ಉತ್ತಮವಾಗಿಸಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿದರು. ಅಂತಿಮವಾಗಿ ಎಲ್ಲರ ಅಭಿಪ್ರಾಯದಂತೆ ಏ. 12 ರಂದು ಕೊಳ್ಳೇಗಾಲದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಚಂದಕವಾಡಿ ಹೋಬಳಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗುವಂತೆ ಘೋಷಣೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಆರ್. ಬಾಲರಾಜು, ನಾನು ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವನು. ಬಿ. ರಾಚಯ್ಯ ಅವರ ಮಗನಾಗಿ ನನ್ನ ಅಣ್ಣ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಹಾಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಹೋದರನಾಗಿ ಮತ್ತೊಂದು ಪಕ್ಷದಲ್ಲಿರುವುದು ಸರಿಯಲ್ಲ. ಇರಿಸು ಮುರುಸು ಆಗುತ್ತದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅವರಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ತುಂಬುವುದು ನನ್ನ ಅನಿಸಿಕೆಯಾಗಿದೆ ಎಂದರು.
ಬಿ. ರಾಚಯ್ಯ ಅವರು ಕುಟುಂಬದಲ್ಲಿ ಎ.ಆರ್. ಕೃಷ್ಣಮುರ್ತಿ ಅವರಿಗೆ ಮೂರು ಸೋಲಾಗಿತ್ತು. ಕಳೆದ 15 ವರ್ಷಗಳಿಂದ ಅಧಿಕಾರ ದೊರೆತಿರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ತಂದೆಯವರ ಅಭಿಮಾನಿಗಳಾದ ನೀವೆಲ್ಲರು ು ಜಿ.ಪಂ. ಚುನಾವಣೆಯಲ್ಲಿ ಅವರ ಮತ್ತೊರ್ವ ಪುತ್ರ ಆರ್. ಬಾಲರಾಜು ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿದ ಪರಿಣಾಮ ಬಿ. ರಾಚಯ್ಯ ಅವರು ಮತ್ತೊಬ್ಬ ಮಗನಾದ ನಾನು ಸಹ ಜನಸೇವೆ ಮಾಡಲು ಸಾಧ್ಯವಾಯಿತು. ನಿಮ್ಮೆಲ್ಲರ ಆಶಯದಂತೆ ಜಿ.ಪಂ. ಸದಸ್ಯನಾಗಿ, ಉತ್ತಮ ಕೆಲಸ ಕಾರ್ಯಗಳನ್ನು ಮಾಡಿರುವ ತೃಪ್ತಿ ಇದೆ. ಇದೇ ರೀತಿ ನಿಮ್ಮೆಲ್ಲರ ಬೆಂಬಲ ಅಶೀರ್ವಾದ ಸದಾ ಮುಂದುವರಿಯಲಿ ಎಂದು ಆಶಿಸಿದರು.
ನಂತರ ನಾನು ಸಹ ಕಾಂಗ್ರೆಸ್‍ಗೆ ಸೇರ್ಪಡೆಯಾದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಿರಿಯ ನಾಯಕರಾದ ವಿ. ಶ್ರೀನಿವಾಸಪ್ರಸಾದ್ ಅವರು ಸ್ಪರ್ಧೆ ಮಾಡಿದ್ದರು. ಅವರ ಗೆಲುವಿಗೆ ನಮ್ಮದು ಪ್ರಮುಖ ಪಾತ್ರ ಇತ್ತು. ಹಿರಿಯರು, ಸ್ವಾಭಿಮಾನಿಗಳಾದ ಶ್ರೀನಿವಾಸಪ್ರಸಾದ್ ಅವರನ್ನು ಗೆಲ್ಲಿಸೋಣ ಎಂದು ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿದೆವು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಸೋಮಣ್ಣ ಅವರೊಂದಿಗೆ ಗುರುತಿಸಿಕೊಂಡು ಅವರ ಪರವಾಗಿ ಕ್ಷೇತ್ರದಲ್ಲಿ ದುಡಿದೆವು.
ಅದೃಷ್ಟವಾಶತ್ ಅವರು ಗೆಲುವು ಸಾಧಿಸಲಿಲ್ಲ. ನಂತರ ದಿನಗಳಲ್ಲಿ ಬಿಜೆಪಿಯಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಸೌಜನ್ಯಕ್ಕು ನನಗೆ ಇದುವರೆಗೆ ಒಂದು ಕರೆ ಮಾಡಿಲ್ಲ. ಹೀಗಾಗಿ ನಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಕಾಂಗ್ರೆಸ್ ಸೇರಿರುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ತಾವೆಲ್ಲರು ಬೆಂಬಲ ನೀಡಿ, ನನ್ನೊಂದಿಗೆ ಪಕ್ಷ ಸೇರ್ಪಡೆಯಾಗಬೇಕು ಎಂದು ಬಾಲರಾಜು ಮನವಿ ಮಾಡಿದರು.
ಇದಕ್ಕೆ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ ಮುಖಂಡರು, ಬಿ.ರಾಚಯ್ಯ ಕುಟುಂಬದ ಹಿತೈಷಿಗಳಾದ ನಮ್ಮೆಗೆಲ್ಲ, ಅಣ್ಣ ತಮ್ಮ ಇಬ್ಬರು ಒಂದೇ ಪಕ್ಷದಲ್ಲಿ ರಾಜಕಾರಣ ಮಾಡುವ ಜೊತೆಗೆ ಜನ ಸೇವೆಯಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿಕೊಂಡು ಮುನ್ನಡೆಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಡಿಮೊಳೆ ರಾಚಶೆಟ್ಟಿ ವಹಿಸಿದ್ದರು. ಮುಖಂಡರಾದ ನಗರಸಭೆ ಮಾಜಿ ಸದಸ್ಯ ಬಸವರಾಜು, ಕಾಗಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಟಶೇಖರ್, ಮುಖಂಡರಾದ ನಾಗಮಲ್ಲೇಶ್, ಮಹದೇವಪ್ಪ, ರಾಮಸಮುದ್ರ ಪ್ರಸನ್ನ, ಜೆ.ಎಂ. ಮರಿಸ್ವಾಮಿ, ಸರಗೂರು ಮೋಳೆ ಅಸ್ಲಂ, ಗ್ರಾ.ಪಂ. ಸದಸ್ಯರಾಧ ಪುಟ್ಟಸ್ವಾಮಿ, ಆಲುರು ಪುಟ್ಟಸ್ವಾಮಿ, ದಡದಹಳ್ಳಿ ಮೂರ್ತಿ, ಚಂದಕವಾಡಿ ರಾಜಣ್ಣ, ಹುಳಿನಂಜನಪುರ ಶಿವಕುಮಾರ್, ಶಂಕರ ದಡದಹಳ್ಳಿ ಮಹದೇವಯ್ಯ, ರಾಜಣ್ಣ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.