ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ. 17 ರಿಂದ ಲಾರಿ, ಟೆಂಪೋ ಚಾಲಕರು ಮಾಲೀಕರ ಅನಿರ್ದಿಷ್ಟ ಮುಷ್ಕರ

ಚಾಮರಾಜನಗರ: ವಾಹನ ಚಾಲಕರ ವಿರುದ್ದ ಭಾರತೀಯ ನ್ಯಾಯ ಸಂಹಿತಾ ನ್ಯೂನ್ಯತೆಯನ್ನು ತಿದ್ದುಪಡಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 17 ರಿಂದ ಲಾರಿ, ಟೆಂಪೋ ಚಾಲಕರು ಮಾಲೀಕರ ಅನಿರ್ದಿಷ್ಟ ಮುಷ್ಕರ ಆರಂಭಿಸಲಿದ್ದು, ಎಲ್ಲಾ ರೀತಿಯ ಸಾಗಾಣಿಕೆ ಬಂದ್ ಆಗಲಿದೆ ಎಂದು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಜಿ. ನಾರಾಯಣ ಪ್ರಸಾದ್ ತಿಳಿದರು.

ನಗರದ ರೋಟರಿ ಭವನದಲ್ಲಿ ಲಾರಿ ಚಾಲಕರು ಮತ್ತು ಮಾಲೀಕರಿಗೆ ಮಾರಕವಾಗಿರುವ ಬಿಎನ್‍ಎಸ್ ಕಾಯ್ದೆ -2023 ಯನ್ನು ಮರು ಪರಿಶೀಲನೆ ಮಾಡುವಂತೆ ಒತ್ತಾಯಿಸಿ, ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯಲ್ಲಿ ಲಾರಿ, ಟೆಂಪೋ ಮಾಲೀಕರು ಹಾಗೂ ಚಾಲಕರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಾರಿ ಮತ್ತು ಟೆಂಪೋ ಮಾಲೀಕರು ಮತ್ತು ಚಾಲಕರು ಕರೆ ನೀಡಿರುವ ಬಂದ್‍ಗೆ ಜಿಲ್ಲೆಯಿಂದ ಸಂಪೂರ್ಣ ಬೆಂಬಲವನ್ನು ನೀಡಲಾಗುತ್ತಿದೆ. ಜ. 17 ರಿಂದ ಎಲ್ಲಾ ರೀತಿಯ ಸಾಗಾಣಿಕೆಯನ್ನು ಬಂದ್ ಮಾಡಲಾಗುತ್ತದೆ. ಈಗ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪಘಾತ ಮಾಡಿದ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಚಾಲಕ ವೃತ್ತಿಗೆ ಬರುವವರೇ ಕಡಿಮೆಯಾಗುತ್ತಿದ್ದಾರೆ. ಭಾರತ ಆರ್ಥಿಕತೆ ಮತ್ತು ಸರಗು ಸಾಗಾಣಿಕೆಯಲ್ಲಿ ಚಾಲಕರ ಪಾತ್ರ ಮಹತ್ವದಾಗಿದೆ. ಅಕಸ್ಮಿಕವಾಗಿ ನಡೆಯುವ ಅಪಘಾತದ ಸಂದರ್ಭಗಳಲ್ಲಿ ಚಾಲಕರನ್ನೇ ಹೊಣೆ ಮಾಡಿ, ಶಿಕ್ಷೆ ವಿಧಿಸುವುದರಿಂದ ಚಾಲಕರ ವೃತ್ತಿಗೆ ಪೆಟ್ಟು ಬೀಳುತ್ತದೆ. ಚಾಲಕರ ವೃತ್ತಿ ಅಭದ್ರತೆ ಹಾಗೂ ಸುರಕ್ಷತೆ ಇಲ್ಲ ಎಂಬ ಕಾರಣಕ್ಕೆ ವÀೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರು ಕಡಿಮೆಯಾಗುತ್ತಾರೆ. ಈಗಾಗಲೇ ಶೇ. 27 ರಷ್ಟು ಚಾಲಕರ ಸಮಸ್ಯೆ ಉಂಟಾಗಿದೆ. ಇನ್ನು ಈ ಕಾಯ್ದೆ ಜಾರಿಯಿಂದ ಇನ್ನು ಹೆಚ್ಚಿನ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ನಾರಾಯಣ ಪ್ರಸಾದ್ ತಿಳಿಸಿದರು.

ರಾಜ್ಯ ಸರ್ಕಾರ ವಿವಿಧ ಬೇಡಿಕೆಗಳಾದ ಗಡಿ ಭಾಗದಲ್ಲಿರುವ ಎಲ್ಲಾ ಸಾರಿಗೆ ಇಲಾಖೆಯ ತಪಾಸಣೆ ಕೇಂದ್ರಗಳನ್ನು ತೆಗೆದು ಹಾಕಬೇಕು. ಹೆಚ್ಚುವರಿ ಲೊಡ್ ವಿಧಿಸುವ 20 ಸಾವಿರ ರೂ. ದಂಡವನ್ನು ಕಡಿಮೆ ಮಾಡಬೇಕು. ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್ ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು. ಡಿಎಸ್‍ಎ ಕೇಸ್ ಎಲ್ಲೇ ಇದ್ದರು ಸಹ ಅದನ್ನು ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳಲು ಅವಕಾಶ ನೀಡಬೇಕು ಎಂಬುದು ಸೇರಿ ಪ್ರಮುಖ 8 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಕಾರ್ಯದರ್ಶಿ ಜಿ. ಮುರುಳೀ ಕೃಷ್ಣ, ಉಪಾಧ್ಯಕ್ಷ ಮೊಕ್ದರ್ ಪಾಷಾ, ಸಹ ಕಾರ್ಯದರ್ಶಿ ಜಾವಿದ್ ಪಾಷಾ, ಖಜಾಂಚಿ ಎಸ್. ಸುರೇಶ್, ಸೈಯದ್ ಕಲೀಲ್, ಮುಸ್ತಾಕ್, ಶಿವಣ್ಣ, ಲಾರಿ ಚಾಲಕರ ಸಂಘದ ಅಧ್ಯಕ್ಷ ತೌಹಿತ್ ಬೇಗ್, ಸಿರಿಜ್, ಅಮ್ಜದ್, ಹಾಗೂ ಲಾರಿ ಮಾಲೀಕರು ಹಾಗು ಚಾಲಕರು ಇದ್ದರು.

Leave a Reply

Your email address will not be published. Required fields are marked *